ಹುಬ್ಬಳ್ಳಿ: ಈತನನ್ನೇ ನಂಬಿ ತನ್ನ ಸ್ವಂತದವರನ್ನು ಬಿಟ್ಟು ಓಡಿ ಬಂದಳು ಈಕೆ. ಮನೆಯವರ ವಿರುದ್ಧವೇ ನಿಂತು ಈತನೊಂದಿಗೆ ಬಾಳ್ವೆ ಮಾಡಲು ಬಂದ ಮಹಿಳೆಗೆ ಸಿಕ್ಕ ಫಲವೇ ಒಂದು ಮಗು. ಈಕೆಗೆ ಈಗ ಇತ್ತ ಗಂಡನೂ ಇಲ್ಲಾ, ಅತ್ತ ಮನೆಯವರೂ ಇಲ್ಲದೆ ಬೀದಿಪಾಲಾಗಿದ್ದಾಳೆ!
ಕೈಯಲ್ಲಿ 3 ತಿಂಗಳ ಹಸುಗೂಸನ್ನು ಇಟ್ಟುಕೊಂಡು ತನಗೆ ನ್ಯಾಯ ಕೊಡಿಸಿ ಎಂದು ಈಕೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಜಯಶ್ರೀ ಎಂಬ ಸೋತ ಮಹಿಳೆಯ ವ್ಯ(ಕ)ಥೆ ಇದು. ಜಯಶ್ರೀ, ಮಂಜುನಾಥ ಶಲವಡಿ ಎಂಬಾತನನ್ನು ನಂಬಿ ಬಂದಿದ್ದಳು. ಮಂಜುನಾಥನ ಊರು ಗದಗ ತಾಲ್ಲೂಕು ಹಿರೇಹಂದಿಗೋಳ. ಜಯಶ್ರೀ ಆ ಊರಿಗೆ ಹೋದಾಗ ಇಬ್ಬರಲ್ಲಿ ಲವ್ ಆಗಿದೆ. ಇಬ್ಬರೂ ಮನೆ ಬಿಟ್ಟು ಓಡಿ ಬಂದು ಹುಬ್ಬಳ್ಳಿಯ ತಾರಿಹಾಳದಲ್ಲಿ ಬಾಡಿಗೆ ಮನೆ ಮಾಡಿ ಸುಖೀ ದಾಂಪತ್ಯ ನಡೆಸುತ್ತಿದ್ದರು.
ಈ ದಂಪತಿ 2 ವರ್ಷಗಳ ವರೆಗೆ ಚೆನ್ನಾಗಿಯೇ ಇದ್ದರಂತೆ. ಆದ್ರೆ, ಮಗು ಆಗುತ್ತಿದ್ದಂತೆಯೇ ಮಂಜುನಾಥ, ಹೆಂಡತಿ ಮತ್ತು ಕೂಸನ್ನು ಬಿಟ್ಟು ತನ್ನೂರಿನತ್ತ ಎಸ್ಕೇಪ್ ಆಗಿದ್ದಾನೆ! ಜಯಶ್ರೀ ಎಷ್ಟೋ ಬಾರಿ ಫೋನ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ. ಅಷ್ಟೇ ಅಲ್ಲದೆ, ಈ ಕಿರಾತಕ ತನ್ನ ಊರಿನಲ್ಲಿ ಇನ್ನೊಂದು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಎಂದು ಜಯಶ್ರೀ ತಿಳಿಸಿದ್ದಾಳೆ.
ಈ ಹಿಂದೆ ಇವರಿಬ್ರು ಮನೆಯಿಂದ ಓಡಿ ಬಂದು ಶ್ರೀ ಸಿದ್ಧಾರೂಢರ ಮಠದಲ್ಲಿ ಮದುವೆ ಆಗಿದ್ದಾರಂತೆ. ಅಂತೂ ಜಯಶ್ರೀ ಇದೀಗ ಬೀದಿಗೆ ಬಿದ್ದಿದ್ದಾಳೆ. ಪೊಲೀಸರು ಈಕೆಗೆ ನ್ಯಾಯ ಕೊಡಿಸುತ್ತಾರಾ? ಕಾದು ನೋಡೋಣ...
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
12/07/2022 02:15 pm