ಹುಬ್ಬಳ್ಳಿ:ವಾಣಿಜ್ಯನಗರಿ ಎಷ್ಟು ದಿನ ಶಾಂತವಾಗಿ ಇರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಕ್ರೈಂ ಪ್ರಕರಣಗಳು ತಲೆ ಎತ್ತುತ್ತಿವೆ. ಮೀಟರ್ ಬಡ್ಡಿ ಹಾವಳಿ ತಪ್ಪಿಸಲು ಅದೆಷ್ಟೋ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಕಮೀಷನರೇಟ್ ಅದೆಷ್ಟೋ ನಿರ್ಧಾರ ಕೈಗೊಂಡರೂ ಕೂಡ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ.
ನಗರದಲ್ಲಿ ಮತ್ತೆ ಮೀಟರ್ ಬಡ್ಡಿ ಕುಳಗಳು ಬಾಲ ಬಿಚ್ಚಲಾರಂಭಿಸಿದ್ದು, ನಾಲ್ವರ ತಂಡ ಕೇಶ್ವಾಪುರ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ಎಳೆದಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ರೇಣು ಕಿರಣ ಮಾಗಡಿ (48) ಎಂಬ ಮಹಿಳೆಯ ಮೇಲೆಯೇ ಏಕಾಏಕಿ ಒಳನುಗ್ಗಿ ಮನೆಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಾಡಿ ಎಳೆದಾಡಿದ್ದು ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕುಖ್ಯಾತ ಬಡ್ಡಿಕುಳ ವಿದ್ಯಾನಗರ ನಿವಾಸಿ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ,ಅನಿಲ ಮೆಹರವಾಡೆ, ನಾರಾಯಣ ಮೆಹರವಾಡೆ ಎಂಬುವವರೇ ಹಲ್ಲೆ ನಡೆಸಿದವರಾಗಿದ್ದಾರೆ. ರೇಣು ಮಾಗಡಿ (48) ತಮ್ಮ ಮಕ್ಕಳೊಂದಿಗೆ ಮನೋಜ ಪಾರ್ಕನಲ್ಲಿನ ಮನೆಯಲ್ಲಿ (ನಂ.116) ವಾಸಿಸುತ್ತಿದ್ದು ಇವರ ಪತಿ ಕಿರಣ ಮಾಗಡಿ ಒಂದು ವರ್ಷದ ಹಿಂದೆ ಮೃತರಾಗಿದ್ದಾರೆ.
ಮನೋಜ್ ಪಾರ್ಕ್‌ದಲ್ಲಿರುವ ಈ ಮನೆಯನ್ನು ರೇಣು ಅವರ ಪತಿ ಜೀವಂತ ಇದ್ದಾಗ ರಾಜೇಶ ಮೆಹರವಾಡೆ ಅನ್ನುವವರಿಗೆ ಸೇಲ್ ಡೀಡ್ ಮಾಡಿಕೊಟ್ಟು ಹಣ ಪಡೆದಿದ್ದು, ಈ ವಿಷಯ ಗಂಡ ತೀರಿಕೊಂಡ ನಂತರ ಅರಿವಿಗೆ ಬಂದಿದೆ. ಪದೇ ಪದೇ ರಾಜೇಶ ಮನೆಗೆ ಬಂದು ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು.
ದಿ.29ರಂದು ಮಧ್ಯಾಹ್ನ 1.45 ಗಂಟೆ ಸುಮಾರಿಗೆ ರೇಣು ಮಾಗಡಿ, ಮಗ ಗಗನ ಹಾಗೂ ಮನೆಕೆಲಸ ಸುಶೀಲಾ ಮಲ್ಲನಗೌಡರ ಇರುವ ವೇಳೆಯಲ್ಲಿ ರಾಜೇಶ, ಮೋಹಿತ, ಅನಿಲ್ ಹಾಗೂ ನಾರಾಯಣ ಮೆಹರವಾಡೆ ಇವರುಗಳು ಒಳ ನುಗ್ಗಿ ಮನೆ ಖಾಲಿ ಮಾಡಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರಲ್ಲದೇ ನಾವು ಏಕೆ ಹೊರಗೆ ಹೋಗಬೇಕು ಅಂತ ಪ್ರಶ್ನಿಸಿದಾಗ ನಮ್ಮ ಹಣ ಕೊಡಿರಿ ಇಲ್ಲವೇ ಮನೆಯಿಂದ ಹೊರಗೆ ಹೋಗಿರಿ ಎಂದು ಹೇಳಿ ಹಾಲ್‌ದಲ್ಲಿದ್ದ ಟಿವಿ, ಟಿಪಾಯಿ, ಸೋಫಾ ಹಾಗೂ ಹಾಲ್‌ದಲ್ಲಿದ್ದ ಎಲ್ಲ ಸಾಮಾನುಗಳನ್ನು ಹೊರಗೆ ಒಗೆದಿದ್ದಾರೆ.
ನಾನು ತಡೆದಿದ್ದರಿಂದ ರಾಜೇಶ ಮೆಹರವಾಡೆ ತಮ್ಮ ಕುತ್ತಿಗೆ ಹಿಡಿದುಕೊಂಡು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ನನಗೆ ಎಲ್ಲರೆದುರೇ ಎಳೆದಾಡಿ ಹೊಡೆದಿದ್ದ ಧರಿಸಿದ್ದ ಟಾಪ್ ಹರಿದು ಮಾನಭಂಗಕ್ಕೆ ಯತ್ನಿಸಿದ್ದು, ತಡೆಯಲು ಬಂದ ಕೆಲಸದಾಕೆಯನ್ನು ತಳ್ಳಿದ್ದಾರೆ.ಆಗ ಮಗನಿಗೆ ಪೊಲೀಸರಿಗೆ ಪೋನ್ ಮಾಡಲು ತಿಳಿಸಿದಾಗ ಮನೆ ಖಾಲಿ ಮಾಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ರೇಣು ಮಾಗಡಿ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
03/08/2022 07:23 pm