ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಶ್ವೇಶ್ವರಯ್ಯ ಕಾಲೇಜಿಗೆ ಬೀಗ ಬೀಳುವ ಸಾಧ್ಯತೆ; ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆ

ಧಾರವಾಡ: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ವಿಶ್ವೇಶ್ವರಯ್ಯ ಕಾಲೇಜಿಗೆ ಬೀಗ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಅಲ್ಲದೇ ಆ ಕಾಲೇಜಿನ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜಿಗೆ ಪ್ರವೇಶ ನೀಡಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವೇಶ್ವರಯ್ಯ ಕಾಲೇಜಿನ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹಾದೇವ ಕುರುವತ್ತಿಗೌಡರ ಅವರು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತರಗತಿಗಳು ನಡೆಯದೇ ಇದ್ದಿದ್ದರಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದರು. ಟೇಬಲ್ ಹಾಗೂ ಇತರ ವಸ್ತುಗಳನ್ನು ಜಖಂ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗಾಗಲೇ ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರಗೊಳಿಸಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರನ್ನು ನಿಯೋಜಿಸುವುದು, ವಿದ್ಯಾರ್ಥಿಗಳು ಇಚ್ಛಿಸುವ ಪದವಿಪೂರ್ವ ಕಾಲೇಜಿಗೆ ಸ್ಥಳಾಂತರಗೊಳಿಸುವುದು, ಜೊತೆಗೆ ಶುಲ್ಕ ರಹಿತವಾಗಿ ಬದಲಾವಣೆ ಮಾಡಿಕೊಡುವಂತೆ ಸರ್ಕಾರ ಆದೇಶಿಸಿದೆ.

ಈಗಾಗಲೇ ಸರ್ಕಾರದ ಆದೇಶದಂತೆ ಧಾರವಾಡದ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಬೆಲ್ಲದ ಅವರನ್ನು ನಿಯೋಜಿಸಲಾಗಿದ್ದು, ಕಾಲೇಜು ಬದಲಾವಣೆಗೆ ಕ್ರಮವಹಿಸಲಾಗಿದೆ. ಇದಲ್ಲದೇ ವಿದ್ಯಾರ್ಥಿಗಳು ಇಚ್ಛಿಸಿದ ಖಾಸಗಿ ಕಾಲೇಜಿನಲ್ಲಿ ಸೀಟು ಸಿಗದೇ ಇದ್ದರೆ ಎಲ್ಲರನ್ನು ಸರ್ಕಾರಿ ಅನುದಾನಿತ ಕಾಲೇಜಿಗೆ ಸ್ಥಳಾಂತರಗೊಳಿಸಲಾಗುವುದುಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಸುಭಾಷ ಕೊಟಗಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

21/08/2022 02:55 pm

Cinque Terre

92.34 K

Cinque Terre

2

ಸಂಬಂಧಿತ ಸುದ್ದಿ