ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ನೇಹಿತನಿಗೆ ಸಹಾಯ ಮಾಡಿದವನಿಗೆ ಸಂಕಷ್ಟ : ನ್ಯಾಯಕ್ಕಾಗಿ ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರ

ಹುಬ್ಬಳ್ಳಿ: ಆತ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿದ್ದ ಯುವಕ. ಆದರೆ ಆತನಿಗೆ ನಿಜಕ್ಕೂ ಎದುರಾಗಿದ್ದು, ಮಾತ್ರ ನರಕ. ಸ್ನೇಹದ ಹೆಸರಲ್ಲಿ ಆತನಿಗೆ ಮೋಸ ಆಗಿದೆಯಂತೆ. ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನ ವಿರುದ್ಧವೇ ದೂರು ದಾಖಲಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು...? ಯಾರು ಆ ಯುವಕ ಅಂತೀರಾ..? ಇಲ್ಲಿದೆ ನೋಡಿ ಒಂದು ರೋಚಕ ಕಹಾನಿ...

ಹೀಗೆ ಕೈಯಲ್ಲಿ ಡಾಕ್ಯುಮೆಂಟ್ ಹಿಡಿದುಕೊಂಡು ಪೊಲೀಸ್ ಆಯುಕ್ತರ ಕಚೇರಿಗೆ ಅಲೆಯುತ್ತಿರುವ ಈ ಯುವಕನ ಹೆಸರು ಆದರ್ಶ ಕಾಮತ್. ಈತ ಬಿಬಿಎ ಓದುತ್ತಿರುವ ವಿದ್ಯಾರ್ಥಿ. ದೋಸ್ತಿಗಾಗಿ ತನ್ನ ಸೀನಿಯರ್ ನಿಖಿಲ್ ಎಂಬುವವನಿಗೆ ಸಾಲದ ರೂಪದಲ್ಲಿ ಹಣವನ್ನು ನೀಡಿದ್ದಾನಂತೆ. ಆದರೆ ಕೊಟ್ಟ ಹಣವನ್ನು ಮರಳಿ ಕೇಳಿದರೇ ನಿಖಿಲ್ ತನ್ನ ಪರಿಚಯವಿರುವ ಸಂತೋಷ ಎಂಬುವಂತ ಪೊಲೀಸ್ ಸಿಬ್ಬಂದಿ ಜೊತೆ ಸೇರಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದ್ದಾರಂತೆ.

ನಾನು ಅಮಾಯಕ ನನ್ನ ಮೇಲೆ ಈ ರೀತಿ ಆರೋಪ ಮಾಡಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾನೆ. ಈ ಕುರಿತು ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರಿಗೂ ಕೂಡ ಪತ್ರವನ್ನು ಬರೆದಿದ್ದಾನೆ.

ಇನ್ನೂ ಸ್ನೇಹಿತನಿಗೆ ಹಣ ನೀಡಿದ್ದೇ ಆದರೆ ಮರಳಿ ಕೇಳಿದ್ದಕ್ಕೆ ನನಗೆ ಹೀಗೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನನ್ನ ತಪ್ಪಿದ್ದರೇ ನನಗೆ ಶಿಕ್ಷೆ ನೀಡಿ ಎಂದು ಆದರ್ಶ ಕಾಮತ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ರಕ್ಷಣೆ ನೀಡಬೇಕಾದ ಆರಕ್ಷಕರೇ ಈ ರೀತಿಯಲ್ಲಿ ಹಣದ ಆಸೆಗೆ ಬಿದ್ದು ಹೀಗೆ ಮಾಡಿದ್ರಾ ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ. ಈಗಾಗಲೇ ಕ್ರಿಕೆಟ್ ಬೆಟ್ಟಿಂಗ್ ಕೇಸ್ ನಲ್ಲಿ ಆದರ್ಶನ ಹೆಸರಿನ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ನಾನು ಹೋರಾಟ ಮಾಡಲು ಸಿದ್ದ ಎಂದಿದ್ದಾರೆ ಆದರ್ಶ.

ಒಟ್ಟಿನಲ್ಲಿ ಈ ಯುವಕ ನ್ಯಾಯಕ್ಕಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಮೆಟ್ಟಿಲೇರಿದ್ದಾನೆ. ಅಲ್ಲದೆ ರಾಜ್ಯ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.

Edited By :
Kshetra Samachara

Kshetra Samachara

19/05/2022 06:21 pm

Cinque Terre

60.5 K

Cinque Terre

8

ಸಂಬಂಧಿತ ಸುದ್ದಿ