ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಗ್ನಿಪಥ ವಿರೋಧಿಸಿ ಪ್ರತಿಭಟನೆ: ಧಾರವಾಡದಲ್ಲಿ ಲಾಠಿ ಚಾರ್ಜ್!

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರೋಧಿಸಿ ದೈಹಿಕ ಪರೀಕ್ಷೆ ಪಾಸಾದ ಸೇನಾ ಅಭ್ಯರ್ಥಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಲಾಠಿ ಚಾರ್ಜ್ ಕೂಡ ನಡೆದಿದೆ.

ಧಾರವಾಡದ ಹಳೇ ಡಿವೈಎಸ್ಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಸುಮಾರು 200 ರಿಂದ 250 ಜನ ಯುವಕರ ಗುಂಪು ಪ್ರತಿಭಟನಾ ಮೆರವಣಿಗೆ ನಡೆಸುತ್ತಿತ್ತು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದೇ ಇದ್ದದ್ದರಿಂದ ಯುವಕರು ಹಾಗೂ ಪೊಲೀಸರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಲಾಠಿ ಚಾರ್ಜ್‌ಗೆ ಕಾರಣವಾಯಿತು.

ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತ ಯುವಕರು ದಿಕ್ಕಾಪಾಲಾಗಿ ಓಡಾಡಲಾರಂಭಿಸಿದರು. ಪೊಲೀಸರು ಕೂಡ ಅವರ ಬೆನ್ನು ಹತ್ತಿ ಲಾಠಿ ಬೀಸಲಾರಂಭಿಸಿದರು. ಹಳೇ ಡಿವೈಎಸ್ಪಿ ವೃತ್ತದಿಂದ ಯುವಕರು ಮಹಾನಗರ ಪಾಲಿಕೆವರೆಗೂ ಓಡಿ ಬಂದರು. ಪೊಲೀಸರು ಕೂಡ ಲಾಠಿ ಬೀಸುತ್ತಲೇ ಅವರ ಬೆನ್ನು ಹತ್ತಿದ್ದರು. ಒಂದು ಹಂತಕ್ಕೆ ಪರಿಸ್ಥಿತಿ ಉದ್ವಿಗ್ನ ಸ್ವರೂಪ ಪಡೆದುಕೊಳ್ಳುವಂತಾಗಿತ್ತು. ಯುವಕರು ಖಾಸಗಿ ಬಸ್‌ ಒಂದಕ್ಕೆ ಕಲ್ಲು ತೂರಾಟ ಕೂಡ ನಡೆಸಿದರು.

ಪೊಲೀಸರು ಪ್ರತಿಭಟನಾ ನಿರತ ಯುವಕರನ್ನು ಎಷ್ಟೇ ಮನವೊಲಿಸಿದರೂ ಕೇಳದ ಅವರು, ಪೊಲೀಸರ ಜೊತೆಗೆ ತೀವ್ರ ವಾಗ್ವಾದಕ್ಕಿಳಿದಿದ್ದರಿಂದ ಈ ಗೊಂದಲ ಉಂಟಾಯಿತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/06/2022 12:19 pm

Cinque Terre

121.01 K

Cinque Terre

39

ಸಂಬಂಧಿತ ಸುದ್ದಿ