ಪಬ್ಲಿಕ್ ನೆಕ್ಸ್ಟ್: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಜೂಜಾಟದ ಚಟಕ್ಕೆ ಮನೆಮಠ ಕಳೆದುಕೊಂಡು ಅದೆಷ್ಟು ಜನರು ಬೀದಿಪಾಲಾಗಿದ್ದಾರೆ. ಅದೇ ಚಟಕ್ಕೆ ಅವಳಿ ನಗರದ ಆಟೋ ಚಾಲಕನೊಕರ್ವ ಕಳ್ಳತನದ ದಾರಿ ಹಿಡಿದು, ಇದೀಗ ಜೈಲುಪಾಲಾಗಿದ್ದಾನೆ.
ಅದರಲ್ಲೂ ಈತ ಮಾಡೋ ಕಳ್ಳತನ ಸ್ಟೈಲ್! ಮಾಡಿರೋ ಕಳ್ಳತನವನ್ನು ನೀವು ನೋಡಿದ್ರೆ ಖಂಡಿತ ದಂಗಾಗೋದು ಕನ್ಫರ್ಮ್.
ಹೀಗೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡಾಡುತ್ತ ನವರಂಗಿ ನಾಟಕ ಮಾಡ್ತಿರೋ ಈ ವ್ಯಕ್ತಿಯ ಹೆಸರು, ನಾಗರಾಜ್ ಅಂಬಿಗೇರ.
ಹಳೇಹುಬ್ಬಳ್ಳಿಯ ನಿವಾಸಿ. ಮೊದಲಿಗೆ ಆಟೋ ಚಲಾವಣೆ ಮಾಡಿಕೊಂಡಿದ್ದ ನಾಗರಾಜ್, ಇತ್ತೀಚೆಗೆ ಕಳ್ಳತನಕ್ಕೆ ಕೈ ಹಾಕಿದ್ದ. ತನ್ನ ಜೂಟಾಟದ ಚಟಕ್ಕೆ ಹಣ ಬೇಕಾದಾಗೆಲ್ಲ ಜನರ ಬೈಕ್ ಗಳಿಗೆ ಖನ್ನ ಹಾಕ್ತಿದ್ದ.
ಅದರಲ್ಲೂ ಈ ಚಾಲಾಕಿ ಕಳ್ಳ ಕದ್ದಿರೋದು ಯಾರದ್ದ ಐಷರಾಮಿ ಮನೆಯನ್ನಲ್ಲ. ದುಬಾರಿ ಬೆಲೆಯ ಕಾರು ಬೈಕ್ ಗಳನ್ನಲ್ಲ. ಇತ ಕದ್ದಿರೋದು ಅವಳಿನಗರದ ಟಿವಿಎಸ್ ಎಕ್ಸ್‌ಎಲ್ ಬೈಕ್ ಗಳು.
ಎಕ್ಸ್‌ಎಲ್ ಬೈಕ್ ಗಳನ್ನೇ ಕದ್ದು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡಿ, ತನ್ನ ಜೂಜಾಟದ ಚಟ ತೀರಿಸಿಕೊಳ್ಳುತ್ತಿದ್ದ.
ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ 25 ಟಿವಿಎಸ್ ಎಕ್ಸ್‌ಎಲ್ ಬೈಕ್ ಗಳಿಗೆ ಖನ್ನ ಹಾಕಿದ್ದು, ಸಿಟಿಟಿವಿ ದೃಶಾವಳಿಗಳನ್ನು ಆಧರಿಸಿ ವಿದ್ಯಾನಗರ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಅಲ್ಲದೇ ಕಳ್ಳತನ ಮಾರಾಟ ಮಾಡುತ್ತಿದ್ದವರಿಗೂ ಜೈಲಿನ ದಾರಿ ತೋರಿಸಿದ್ದಾರೆ.
ಬೈಕ್ ಕಳೆದುಕೊಂಡಿರೋ ಮಾಲೀಕರು ದೂರು ದಾಖಲಿಸಿ, ಪರದಾಟ ನಡೆಸಿದ್ರೆ, ಅದೇ ಬೈಕ್ ಗಳ ನಂಬರ್ ಪ್ಲೇಟ್ ಮತ್ತು, ಗಾಡಿಗಳಲ್ಲಿರುತ್ತಿದ್ದ ದಾಖಲೆಗಳನ್ನೇ ನಕಲು ಮಾಡಿ ಮಾರಾಟ ಮಾಡಿ ಹಣ ಪಡೆದು ಜೂಟ್ ಆಗ್ತಿದ್ದ.
ಈ ಕುರಿತು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ವಿದ್ಯಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಸಿ, ವಿಚಾರಣೆ ನಡೆಸಿದ್ದಾರೆ.
ಆಗ ಆತ ಕದ್ದಿರೋ ಬೈಕ್ ಗಳ ಲಿಸ್ಟ್ ಬಾಯಿಬಿಟ್ಟಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ. ಬರೋಬ್ಬರಿ 25 ಎಕ್ಸ್‌ಎಲ್ ಬೈಕ್ ಗಳನ್ನು ಕದ್ದಿರೋದಾಗಿ ಆತನೇ ಒಪ್ಪಿಕೊಂಡು, ಮಾರಾಟ ಮಾಡಿರೋ ಎಲ್ಲ ಮಾಹಿತಿಯನ್ನು ಹೇಳಿದ್ದಾನೆ.
ಆಟೋ ಚಲಾವಣೆ ಜೊತೆಗೆ ಆಟೋಗಳ ಮಾರಾಟ ಕೂಡ ನಾಗರಾಜ್ ಮೊದಲಿಗೆ ಮಾಡುತ್ತಿದ್ದ. ಹೀಗಾಗಿ ಅದೇ ಜನರ ಪರಿಚಯವನ್ನೇ ಬಳಕೆ ಮಾಡಿಕೊಂಡು ಕದ್ದ ಎಕ್ಸ್‌ಎಲ್ ಬೈಕ್ ಗಳನ್ನು ಹಾಯಾಗಿ ಮಾರಾಟ ಮಾಡಿ ದುಡ್ಡು ಪಡೆಯುತ್ತಿದ್ದ.
ಕದ್ದಿರೋ ಟಿವಿಎಸ್ ಎಕ್ಸ್‌ಎಲ್ ಬೈಕ್ ಗಳನ್ನು ಮೂರು, ನಾಲ್ಕು ಸಾವಿರ ರೂಪಾಯಿಗೆ ಮಾರಾಟ ಮಾಡಿ ಜೂಜಾಟಕ್ಕೆ ತೆರಳುತ್ತಿದ್ದ. ಯಾರಾದರೂ ಇತನನ್ನ ಜೂಜಾಟಕ್ಕೆ ಕರೆದ್ರೆ, ಅವತ್ತುಆ ಏರಿಯಾದಲ್ಲಿರುವ ಎಕ್ಸ್‌ಎಲ್ ಬೈಕ್ ಮಂಗಮಾಯ ಮಾಡ್ತಿದ್ದ.
ಹೀಗಾಗಿ ಕಳೆದುಕೊಂಡಿದ್ದ ಬೈಕ್ ಮಾಲೀಕರಿಗೆ ದಾಖಲೆ ಪರಿಶೀಲನೆ ಮಾಡಿ ಬೈಕ್ ನೀಡುವ ಕೆಲಸ ಮಾಡುತಿದ್ದಾರೆ. ಇದರಿಂದ ಬೈಕ್ ಮಾಲೀಕರು ಖುಷ್ ಆಗಿದ್ದಾರೆ.
52 ವರ್ಷದ ನಾಗರಾಜ್ ಅಂಬಿಗೇರ ಮೊದಲಿಗೆ ಆಟೋ ಚಾಲಕನಾಗಿ ಜೀವನ ನಡೆಸಿದ್ದ. ಈ ವೇಳೆ ಸಣ್ಣ ಅಪಘಾತ ಆಗಿದ್ದರಿಂದ ನಾಗರಾಜ್ ಕಣ್ಣಿಗೆ ಏಟಾಗಿದೆ.
ಹೀಗಾಗಿ ಹಲವು ದಿನಗಳಿಂದ ಆಟೋ ಚಲಾವಣೆ ಮಾಡೋದನ್ನ ನಾಗರಾಜ್ ಬಿಟ್ಟಿದ್ದ. ಜೂಜಾಟದ ಚಟ ಬಿಟ್ಟರೇ ಬೇರೆ ಯಾವುದೇ ಚಟವಿಲ್ಲದ ನಾಗರಾಜ್ ಇದೀಗ ಅದೇ ಚಟದಿಂದಾಗಿ ಜೈಲು ಪಾಲಾಗಿದ್ದಾನೆ......!
Kshetra Samachara
23/12/2020 11:20 am