ಹುಬ್ಬಳ್ಳಿ: ಆತ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ನ ಪೊಲೀಸ್ ಅಧಿಕಾರಿ. ಆತನ ವಿರುದ್ಧವೇ ಕೆಲವು ದಿನಗಳ ಹಿಂದೆ ತನ್ನದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದ್ರೇ ಈಗ ಆ ಅಧಿಕಾರಿ ಅಮಾನತಿಗೆ ವಕೀಲರ ಕೂಗು ಕೇಳಿ ಬರುತ್ತಿದ್ದೆ. ಅಷ್ಟಕ್ಕೂ ಆ ಅಧಿಕಾರಿ ಯಾರು...? ಅಲ್ಲಿ ನಡೆದಿರುವುದಾದರೂ ಏನು ಎಂಬುವಂತ ಅಸಲಿಯತ್ತನ್ನು ತೋರಸ್ತೀವಿ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಹತ್ತಿರ ಕಳೆದ 26 ರಂದು ರಾತ್ರಿ ವೇಳೆಯಲ್ಲಿ ಪೊಲೀಸ್ ಹಾಗೂ ವಕೀಲರ ಮಧ್ಯೆ ಗಲಾಟೆಯೊಂದು ನಡೆದಿತ್ತು. ಈ ಗಲಾಟೆಯಲ್ಲಿ ವಕೀಲ ವಿನೋದ ಪಾಟೀಲ ಮೇಲೆ ನವನಗರ ಪೊಲೀಸ್ ಠಾಣೆ ಸಿಪಿಐ ಪ್ರಭು ಸೂರಿನ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ಅಲ್ಲದೇ ಪ್ರಭು ಸೂರಿನ ವಕೀಲರನ್ನು ವಶಕ್ಕೆ ಪಡೆದಿದ್ದ ಬೆನ್ನಲ್ಲೇ ಧಾರವಾಡದಲ್ಲಿ ಪೊಲೀಸ್ ವಿರುದ್ಧ ಬಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಪೊಲೀಸ್ ಅಧಿಕಾರಿ ಅಮಾನತಿಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಪೊಲೀಸ್ ಸಿಬ್ಬಂಧಿಗಳು ಸಾಮೂಹಿಕ ವರ್ಗಾವಣೆಗೆ ಪ್ರತಿಭಟನೆ ಕೂಡ ನಡೆಸಿದ್ದರು. ಆದ್ರೆ, ಐಜಿಪಿ ರಾಘವೇಂದ್ರ ಸುಹಾನ ಪೊಲೀಸ್ ಅಧಿಕಾರಿ ಪ್ರಭು ಸೂರಿನನಾ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಹುಬ್ಬಳ್ಳಿ ವಕೀಲರು ಮಾತ್ರ ವರ್ಗಾವಣೆ ಬೇಡ ಅಮಾನತು ಮಾಡುವಂತೆ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ..
ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ರಸ್ತೆಗೆ ಇಳಿದ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ವಕೀಲರ ಮೇಲೆ ಅನುಚಿತವಾಗಿ ವರ್ತನೆ ತೋರಿ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ. ಕೂಡಲೇ ಅಮಾನತುಗೊಳಿಸಿ ವಕೀಲರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ನ್ಯಾಯ ಸಿಗುವವರೆಗೂ ಕಲಾಪಕ್ಕೆ ಹಾಜರಗುವುದಿಲ್ಲ. ಈ ಕುರಿತು ಗೃಹ ಸಚಿವರು ಮಧ್ಯಸ್ಥಿಕೆ ವಹಿಸಿ ವಕೀಲರ ಮೇಲೆ ನಡೆಸಿರುವ ಹಲ್ಲೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಒಂದಾದ ಮೇಲೆ ಒಂದು ರೀತಿಯಲ್ಲಿ ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಪ್ರಭು ಸೂರಿನ ವಿರುದ್ಧ ವಕೀಲರ ವಲಯದಲ್ಲಿ ಸಾಕಷ್ಟು ಅಸಮಾಧಾನ ಸೃಷ್ಟಿಯಾಗಿದೆ. ಕೂಡಲೇ ಗೃಹ ಸಚಿವರು ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕಿದೆ.
Kshetra Samachara
30/11/2020 06:02 pm