ಹುಬ್ಬಳ್ಳಿ: ಆತ ಆ ಊರಿನ ಅಳಿಯ. ತನ್ನ ನಾಲ್ಕು ತಿಂಗಳ ಮಗುವನ್ನು ಹಾಗೂ ಹೆಂಡತಿಯನ್ನು ನೋಡಿಕೊಂಡು ಹೋಗಲು ಮಾವನ ಮನೆಗೆ ಬಂದಿದ್ದ, ಎರಡು ದಿನ ಮಾವನ ಮನೆಯಲ್ಲಿ ಉಳಿದ್ದ ಆತ
ಭೀಕರವಾಗಿ ಹತ್ಯೆಯಾಗಿದ್ದ. ಈ ಹತ್ಯೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಕಾದಿತ್ತು. ಹತ್ಯೆಯ ಹಿಂದೆ ಪತ್ನಿಯ ಅಕ್ರಮ ಸಂಬಂಧದ ನೆರಳು ಇತ್ತು.
ಹೀಗೆ ಫೋಟೋದಲ್ಲಿರುವ ಈ ಜೋಡಿಯ ಹೆಸರು ಅಕ್ಷತಾ ಹಾಗೂ ಜಗದೀಶ. ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ನಿವಾಸಿಯಾದ ಅಕ್ಷತಾಳನ್ನು ಹಾವೇರಿ ಜಿಲ್ಲೆಯ ಹಾನಗಲ್ ನ ಜಗದೀಶನಿಗೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಇದರ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆ ಅಕ್ಷತಾ ಒಂದು ಮಗುವಿಗೆ ಕೂಡಾ ಜನ್ಮವನ್ನು ನೀಡಿದ್ದಳು. ಹೀಗಿರುವಾಗ ಗಂಡ ಹೆಂಡತಿ ಮನೆಗೆ ಬಂದಾಗ ದಾರುಣವಾಗಿ ಹತ್ಯೆಯಾಗಿದ್ದ. ಇನ್ನು ನಡುರಾತ್ರಿ ಹತ್ಯೆಯಾದ ಜಗದೀಶ ಬೆಳಿಗ್ಗೆ ಯಾಗುವುದರೊಳಗೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿತ್ತು,ಕೂಡಲೇ ಕಾರ್ಯ ಪ್ರವೃತ್ತರಾದ ಇನ್ಸ್ಪೆಕ್ಟರ್ ರಮೇಶ್ ಗೋಕಾಕ ಆಂಡ್ ಟೀಮ್ ಸ್ಪಾಟ್ ಗೆ ವಿಸಿಟ್ ಕೊಟ್ಟಿತ್ತು ,ಅಷ್ಟರಲ್ಲಾಗಲೇ ಖಾಕಿಗೆ ಹೆಂಡತಿಯ ಮೇಲೆ ಅನುಮಾನದ ವಾಸನೆ ಮೂಡಿತ್ತ. ಒಂದಿಟು ತಡಮಾಡದೆ ಇನ್ಸ್ಪೆಕ್ಟರ್ ರಮೇಶ ಗೋಕಾಕ ಜಗದೀಶನ ಪತ್ನಿಯ ಕಾಲ್ ಡಿಟೇಲ್ಸ್ ಎಲ್ಲವನ್ನು ಕಲೆ ಹಾಕಿ ನವರಂಗಿ ಆಟವನ್ನು ಆಡಿದ್ದ ಅಕ್ಷತಾ ಹಾಗೂ ಆಕೆಯ ಪ್ರಿಯಕರ ಕಾಶಪ್ಪ ನನ್ನು ಎತ್ತಾಕೊಂಡು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಾರೆ..
ಆಗ್ಲೇ ನೋಡಿ ಅಲ್ಲೊಂದು ಅನೈತಿಕ ಸಂಬಂಧದ ಕಹಾನಿ ಕೂಡಾ ಕೇಳಿಬರತ್ತೆ,ಅಕ್ಷತಾನ ಪ್ರಿಯಕರ ಕಾಶಪ್ಪ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂಡಕೇರಿ ಗ್ರಾಮದವ ಈತ ಕಳೆದ ಐದು ವರ್ಷದಿಂದ ಲೈನ್ ಮೆನ್ ಆಗಿ ಅಂಚಟಗೇರಿಯಲ್ಲಿ ಅಕ್ಷತಾಳ ಮನೆ ಮುಂದೆಯೇ ಮನೆ ಮಾಡಿಕೊಂಡು ಇರ್ತಾನೆ, ಹೀಗಾಗಿ ಕಳೆದ ಐದು ವರ್ಷದಿಂದ ಕೂಡಾ ಇವರಿಬ್ಬರ ಸಂಬಂಧ ಕೂಡಾ ಇತ್ತು ಜೊತೆಗೆ ಕಾಶಪ್ಪ ನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಿವಾಹ ಆಗಿತ್ತು. ಅಕ್ಷತಾಳ ಮದುವೆಯಾದ ನಂತರ ಕೂಡಾ ಈ ಅನೈತಿಕ ಸಂಬಂಧ ಮುಂದುವರೆಯತ್ತೆ, ಇನ್ನು ನಮ್ಮ ಸಂಬಂಧ ಮುಂದುವರೆಯ ಬೇಕಾದ್ರೆ ನಮಗೆ ಅಡ್ಡವಾಗಿರುವ ಅಕ್ಷತಾಳ ಗಂಡ ಜಗದೀಶ ನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿ ಕಳೆದ ಮಂಗಳವಾರ ಕಾಶಪ್ಪ ಜಗದೀಶನಿಗೆ ಎಣ್ಣೆಪಾರ್ಟಿ ಮಾಡಿ ಊರಿನ ಹೊರವಲಯದ ಚೆನ್ನಾಪುರ ಕ್ರಾಸ್ ಬಳಿ ಜಗದೀಶನ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಅಲ್ಲಿಂದ ಕಾಲ್ಕಿಳ್ಳುತ್ತಾನೆ.
ಆದ್ರೆ ಅಕ್ರಮ ಸಂಬಂಧದ ಬಗ್ಗೆ ಅಕ್ಷತಾ ಜಗದೀಶ್ ಮನೆಯವರಿಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಮನೆಯವರ ಜೊತೆ ಚೆನ್ನಾಗಿಯೇ ಇದ್ದಳು. ಆದ್ರೆ ಹೆರಿಗೆಗೆಂದು ಬಂದವಳು ತಮ್ಮ ಸಹೋದರನ ಹತ್ಯೆಯಲ್ಲಿ ಅಕ್ಷತಾಳು ಕೈ ಜೋಡಸಿದಕ್ಕೆ ಜಗದೀಶ್ ಕುಟುಂಬದವರು ಮರಗುತ್ತಿದ್ದಾರೆ.
ಇನ್ನು ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆಯ ಪೊಲೀಸರು ಹಗಲು ರಾತ್ರಿ ಎನ್ನದೆ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಿ ಕೇವಲ 24 ಗಂಟೆಗಳಲ್ಲಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅನೈತಿಕ ಸಂಬಂಧಕ್ಕಾಗಿ ಅಮಾಯಕ ಗಂಡನ ಜೀವವನ್ನು ತೆಗೆದು ಏನು ಅರಿಯದ ನಾಲ್ಕು ತಿಂಗಳ ಮಗುವನ್ನು ಅನಾಥ ಮಾಡಿದ ಅಕ್ಷತಾ ಹಾಗೂ ಆಕೆಯ ಪ್ರಿಯಕರ ಕಾಶಪ್ಪನ ಬದುಕಿಗ ನಾಲ್ಕು ಗೋಡೆಗಳ ಮಧ್ಯ ಕಳೆಯುವಂತಾಗಿದೆ.
Kshetra Samachara
27/11/2020 05:11 pm