ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆಯನ್ನು ತಾವೇ ಮಾಡಿರುವುದಾಗಿ ಈ ಮೊದಲು ಒಪ್ಪಿಕೊಂಡಿದ್ದ ಬಸವರಾಜ ಮುತ್ತಗಿ, ಸಂದೀಪ್ ಸವದತ್ತಿ, ಕೀರ್ತಿ ಕುಮಾರ್, ವಿನಾಯಕ ಕಟಗಿ, ವಿಕ್ರಮ್ ಬಳ್ಳಾರಿ, ಮಹಾಬಳೇಶ್ವರ ಹೊಂಗಲ್ ಹಾಗೂ ಸಂತೋಷ ಎಂಬುವವರನ್ನು ಸಿಬಿಐ ಅಧಿಕಾರಿಗಳು ಇಂದು ಮತ್ತೆ ವಿಚಾರಣೆಗೊಳಪಡಿಸಿದ್ದಾರೆ.
ಈಗಾಗಲೇ ಈ ಹಿಂದೆ ಈ ಆರೂ ಜನ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ, ವಿನಯ್ ಕುಲಕರ್ಣಿ ಅವರ ಬಂಧನದ ನಂತರವೂ ವಿಚಾರಣೆಗೊಳಪಡಿಸಿದ್ದು, ಹಣದ ಬಗ್ಗೆ ಅನೇಕ ಆಯಾಮಗಳಲ್ಲಿ ಇವರನ್ನು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
Kshetra Samachara
11/11/2020 05:51 pm