ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೆಳ್ಳಂಬೆಳಿಗ್ಗೆ ಹರಿಯಿತು ನೆತ್ತರು:ಚಾಕು ಇರಿದು ವ್ಯಕ್ತಿ ಕೊಲೆ

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು.ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿನಡೆದಿದೆ..

ಗದಗನ ಕಾನೂನು ಕಾಲೇಜಿನ ಪ್ರೊಫೆಸರ್ ಶಂಕ್ರಪ್ಪ ಮುಶನ್ನವರ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು,ಕೌಟುಂಬಿಕ ಕಲಹ ಹಿನ್ನೆಲೆ, ಅಳಿಯನಿಂದಲೇ ಮಾವನ ಕೊಲೆಯಾಗಿದೆ ಎಂಬುವಂತ ಶಂಕೆ‌ ವ್ಯಕ್ತವಾಗುತ್ತಿದ್ದು,ಪೊಲೀಸ್ ತನಿಖೆಯ ಮೂಲಕವೇ ಸತ್ಯ ಬೆಳಕಿಗೆ ಬರಲಿದೆ.

ಇತ್ತಿಚೆಗೆ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಶಂಕ್ರಪ್ಪ ಅವರನ್ನು ಬೆಳ್ಳಂಬೆಳಿಗ್ಗೆ ಕೊಲೆ ಮಾಡಿದ್ದು,

ಸ್ಥಳಕ್ಕೆ ವಿದ್ಯಾನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇನ್ನೂ ಮೃತ ವ್ಯಕ್ತಿಯ ಶವ ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು,ವಿದ್ಯಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

24/10/2020 11:31 am

Cinque Terre

70.97 K

Cinque Terre

8

ಸಂಬಂಧಿತ ಸುದ್ದಿ