ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾನ್ ಶಾಪ್ ಗೆ ಕನ್ನ ಹಾಕಿದ ಖದೀಮರು

ಧಾರವಾಡ: ಧಾರವಾಡದ ಸಿಲ್ವರ್ ಆರ್ಚರ್ಡ್ ಕಾಲೊನಿಯಲ್ಲಿನ ಪಾನ್ ಶಾಪ್ ಒಂದಕ್ಕೆ ಕಳ್ಳರು ಕನ್ನ ಹಾಕಿದ್ದು, ಅಂದಾಜು 30 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಬಾಸ್ಕರ್ ಶೆಟ್ಟಿ ಎಂಬುವವರಿಗೆ ಈ ಪಾನ್ ಶಾಪ್ ಸೇರಿದ್ದು, ಇದಕ್ಕೂ ಮುನ್ನ ಎರಡು ಬಾರಿ ಇದೇ ಪಾನ್ ಶಾಪ್ ನಲ್ಲಿನ ಸಾವಿರಾರು ರೂಪಾಯಿಯ ಸಾಮಗ್ರಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು.ಪದೇ ಪದೇ ತಮ್ಮ ಅಂಗಡಿಯಲ್ಲಿನ ಸಾಮಾನು ಕಳ್ಳತನವಾಗುತ್ತಿರುವುದರಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.

ಈ ಹಿಂದೆ ಕಳವು ಆದಾಗ ಪೊಲೀಸರಿಗೆ ಮಾಲೀಕರು ದೂರು ನೀಡಿದ್ದರಂತೆ ಆದರೆ, ಪೊಲೀಸರು ಗಂಭೀರವಾಗಿ ಪರಿಗಣಿಸದೇ ಇರುವುದು ಈ ರೀತಿ ಪದೇ ಪದೇ ಕಳ್ಳತನವಾಗುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಇಂದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Manjunath H D
Kshetra Samachara

Kshetra Samachara

21/10/2020 04:51 pm

Cinque Terre

34.45 K

Cinque Terre

1

ಸಂಬಂಧಿತ ಸುದ್ದಿ