ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಲದ ಬಾಧೆಗೆ ಮನನೊಂದು ನೇಣಿಗೆ ಕೊರಳೊಡ್ಡಿದ ರೈತ

ಕುಂದಗೋಳ : ಅತಿವೃಷ್ಟಿ ಪರಿಣಾಮ ಬೆಳೆದ ಬೆಳೆ ಹಾಳಾಗಿದ್ದು ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಶಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪಕ್ಕಿರಪ್ಪ ಈರಪ್ಪ ಪುಟ್ಟಣ್ಣನವರ ವಯಾ (63) ಎಂದು ತಿಳಿದು ಬಂದಿದ್ದು, ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಈತ ತಮ್ಮ ಹೊಲಕ್ಕೆ ಬೀಜ ಗೊಬ್ಬರ ಹಾಗೂ ಎಣ್ಣೆ ಇತರೆ ಖರ್ಚಿಗಾಗಿ ಸಂಶಿ ವಿಜಯಾ ಬ್ಯಾಂಕಿನಲ್ಲಿ 80.000 ಸಾವಿರ ಹಾಗೂ 40.000 ಸಾವಿರ ಕೈಗಡ ಸಾಲ ಮಾಡಿಕೊಂಡಿದ್ದು ಕಳೆದ ಮೂರ್ನಾಲ್ಕು ವರ್ಷಗಳಿಂದ ಅನಾವೃಷ್ಟಿ ಹಾಗೂ ಅತೀವೃಷ್ಟಿ ಸುಳಿಗೆ ಸಿಲುಕಿ ಬೆಳೆದ ಬೆಳೆ ಕೈಗೆ ಸಿಗದೆ ಮಾಡಿದ ಸಾಲ ಮರಳಿ ಹೇಗೆ ತೀರಿಸುವುದು ಎಂದು ಮಾನಸಿಕವಾಗಿ ಜೀವನದಲ್ಲಿ ಜಿಗಪ್ಸೆಹೊಂದಿ ತನ್ನಷ್ಟಕ್ಕೆ ತಾನೇ ತಮ್ಮ ಹೊಸ ಮನೆಯ ಜಂತಿಗೆ ವಾಯರ್ ಹಗ್ಗ ಕಟ್ಟಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

18/09/2020 08:35 pm

Cinque Terre

77.99 K

Cinque Terre

2

ಸಂಬಂಧಿತ ಸುದ್ದಿ