ಕಲಘಟಗಿ : ಪಟ್ಟಣದ ಗೌಳಿ ಓಣಿಯ ಮನೆಯಲ್ಲಿ ಯಾರು ಇಲ್ಲದೇ ಇರುವಾಗ ನಗದು ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾದ ಪ್ರಕರಣ ಜರುಗಿದೆ.
ಪಟ್ಟಣದ ಯಲ್ಲಪ್ಪ ಗೌಳಿ ಎಂಬುವರ ಬಾಡಿಗೆ ಮನೆಯಲ್ಲಿ ಇರುವ, ಸುಷಾಂತ ಕಾದ್ರೋಳಕರ ಎಂಬುವರು ಮನೆಯ ಬೀಗ ಹಾಕಿಕೊಂಡು ಹೋದ ಸಮಯದಲ್ಲಿ ಮನೆಯ ಮೇಲಿನ ಹಂಚು ತೆಗೆದು ಟ್ರೇಜರಿಯ ಲಾಕ್ ಮುರಿದು ಕೃತ್ಯವನ್ನು ಎಸಗಲಾಗಿದೆ, ಗುರುವಾರಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
2,50,000 ರೂಪಾಯಿ ನಗದು ಹಾಗೂ 98 ಗ್ರಾಂ ತೂಕದ ಬಂಗಾರದ ಹಾಗೂ 90 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.ನಗದು ಸೇರಿದಂತೆ ಅಂದಾಜು 5,50,600 ರೂ ಮೌಲ್ಯದ ಕಳ್ಳತನ ಮಾಡಲಾಗಿದೆ.
ಸ್ಥಳಕ್ಕೆ ಎಸ್ ಪಿ ವರ್ತಿಕಾ ಕಟಿಯಾರ,ಡಿ ವೈ ಎಸ್ ಪಿ ರಾಮನಗೌಡ ಹಟ್ಟಿ,ಸಿಪಿಐ ವಿಜಯ ಬಿರಾದಾರ ಭೇಟಿ ನೀಡಿದ್ದಾರೆ, ಪ್ರಕರಣ ದಾಖಲಾಗಿದೆ.
Kshetra Samachara
03/10/2020 10:36 am