ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಲ್ಲದೇ ಕ್ರಿಕೆಟ್ ಆಟವನ್ನು ಬಂಡವಾಳ ಮಾಡಿಕೊಂಡ ಅದೆಷ್ಟೋ ಕಿಂಗ್ ಪಿನ್ ಗಳು ಬೆಟ್ಟಿಂಗ್ ದಂಧೆ ಪ್ರಾರಂಭಿಸಿದ್ದು,ಇಂತಹದೊಂದು ಪ್ರಕರಣ ಭೇದಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು.. ಟ್ವೆಂಟಿ–20 ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, 18,600 ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಗಾರ್ಡನ್‌ಪೇಟೆಯ ಮಹ್ಮದ್ ಹೊಂಗಲ ಮತ್ತು ಮಕಾನದಾರ ಗಲ್ಲಿಯ ನವೀದ್ ಮಾಲ್ದಾರ್ ಬಂಧಿತರು. ಆರೋಪಿಗಳು ಅ. 3ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ, ಹಳೇಹುಬ್ಬಳ್ಳಿ ಬಾಣತಿಕಟ್ಟಿ ವೃತ್ತದ ಬಳಿ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
05/10/2020 11:57 am