ಹುಬ್ಬಳ್ಳಿ: ಬಸ್ ಚಾಲಕ ಉಗುಳಿದ ಎಂಬ ಕಾರಣಕ್ಕೆ ಯುವಕರಿಬ್ಬರು ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಗಬ್ಬೂರು ಬೈಪಾಸ್ ಬಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಹಾವೇರಿಯತ್ತ ಹೋಗುತ್ತಿದ್ದ ಸರ್ಕಾರಿ ಬಸ್ ಚಾಲಕ ಬಂಕಾಪುರ ಚೌಕ್ ಬಳಿಯಲ್ಲಿ ಬೈಕ್ ಸವಾರರ ಮೇಲೆ ಉಗುಳಿದ್ದಾನೆ ಎಂದು ಆರೋಪಿಸಿ ಯುವಕರು ಬಸ್ ಬೆನ್ನತ್ತಿ. ಗಬ್ಬೂರು ಸರ್ಕಲ್ ಬಳಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಕಬ್ಬಿಣದ ಸ್ಟೀಕ್ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ.
ಕೂಡಲೇ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ಅವರಿಂದ ಕಬ್ಬಿಣದ ಸ್ಟೀಕ್ ವಶಕ್ಕೆ ಪಡೆದು ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
Kshetra Samachara
12/09/2022 05:51 pm