ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೀರೆಯಿಂದ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಹುಬ್ಬಳ್ಳಿ: ಯುವಕನೊಬ್ಬ ವೈಯಕ್ತಿಕ ಕಾರಣದಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯ ನ್ಯೂಕಾಟನ್ ಮಾರ್ಕೆಟ್ ನಲ್ಲಿ ನಡೆದಿದೆ.

ಶಿವಕುಮಾರ ನಿಂಗನಗೌಡ ಪಾಟೀಲ್ (23) ಎಂಬ ಯುವಕನೇ ನ್ಯೂಕಾಟನ್ ಮಾರ್ಕೆಟ್ ಬಳಿಯ ತನ್ನ ಮನೆಯಲ್ಲಿ ಬುಧವಾರ ಮಧ್ಯರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಉಪನಗರ ಠಾಣೆಯ ಇನ್ಸ್‌ ಪೆಕ್ಟರ್ ರವಿಚಂದ್ರ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನಿಸಿ, ಯುವಕನ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ.

Edited By : Somashekar
Kshetra Samachara

Kshetra Samachara

28/07/2022 02:57 pm

Cinque Terre

52.02 K

Cinque Terre

0

ಸಂಬಂಧಿತ ಸುದ್ದಿ