ಹುಬ್ಬಳ್ಳಿ- ಹೀಗೆ ದೃಶ್ಯಗಳಲ್ಲಿ ಕಣ್ಣೀರಿಡುತ್ತ, ಅಸಮಾಧಾನ ಹೊರಹಾಕುತ್ತಿರೋ ಈ ಕುಟುಂಬಸ್ಥರು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪುರ ಗ್ರಾಮದ ನಿವಾಸಿಗಳು. ವಿಠಲಾಪುರದಲ್ಲಿ ಹಲವು ವರ್ಷಗಳಿಂದ ನೆಲೆ ನಿಂತಿರೋ ಈ ದಲಿತ ಕುಟುಂಬದ ಮೇಲೆ ಸವರ್ಣಿಯರು ಹಲ್ಲೆ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ...
ಲಕ್ಷ್ಮವ್ವ ಹರಿಜನ ಹಾಗೂ ಅವರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಹಲ್ಲೆ ಮಾಡಲಾಗುತ್ತಿದ್ದು, ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ದಿನನಿತ್ಯ ಮನೆಯ ಮುಂದೆ ಸತ್ತ ನಾಯಿ, ಬೆಕ್ಕುಗಳ ಶವವನ್ನು ತಂದು ಒಗೆದು ಹಿಂಸೆ ನೀಡುತ್ತಿದ್ದಾರೆ. ನಾವು ಇರೋ ಜಾಗದಲ್ಲಿ ಸವರ್ಣಿಯರು ಸಿದಿಗೆ ಇಟ್ಟಿದ್ದು, ನಮ್ಮನ್ನು ಅಲ್ಲಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಕೂಡ ನಮ್ಮ ಮೇಲೆ ಹಲ್ಲೆ ಮಾಡಿ, ದೌರ್ಜನ್ಯವೆಸಗಿದ್ದರು. ಹೀಗಾಗಿ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ಮೊರೆ ಹೋದರು ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ಕಣ್ಣಿರು ಹಾಕಿದರು.
2019 ರ ಫೆಬ್ರವರಿಯಲ್ಲಿ ಈ ಹರಿಜನ ಕುಟುಂಬದ ಮೇಲೆ ಸವರ್ಣಿಯರು ಹಲ್ಲೆ ನಡೆಸಿದ್ದರು. ಈ ಹಲ್ಲೆಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ದೀಪಾ ಚೋಳನ, ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದರು. ಆದರೆ, ಹಲ್ಲೆ ನಡೆಸಿದ್ದ ಹದಿನೈದು ಜನರಲ್ಲಿ ಕೇವಲ ಐದು ಜನರನ್ನು ಬಂಧಿಸಿದ್ದ ಪೊಲೀಸರು, ಪ್ರಕರಣದ ತನಿಖೆ ಮುಂದುವರೆಸೋದಾಗಿ ಹೇಳಿ ಕೈ ಚೆಲ್ಲಿದ್ದರು. ಅಲ್ಲದೇ ಜಿಲ್ಲಾಧಿಕಾರಿ ದೀಪಾ ಚೋಳನ ಬದಲಾವಣೆಯಾದ ಬೆನ್ನಲ್ಲೆ ಇದೀಗ ದಲಿತ ಕುಟುಂಬದ ಮೇಲೆ ಮತ್ತೆ ದೌರ್ಜನ್ಯ ಹೆಚ್ಚಾಗಿದೆ. ದಿನನಿತ್ಯ ಇಲ್ಲದ ಕಿರುಕುಳ ನೀಡುತ್ತಿರೋ ಆರೋಪ ಕೇಳಿ ಬರುತ್ತಿದೆ...
Kshetra Samachara
15/10/2020 09:17 pm