ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಲ್ಪಾವಧಿಯ ಶಿಕ್ಷೆಗೆ ಗುರಿಯಾದ ಆರು ಜನ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.
ನಾರಾಯಣ ತಂದೆ ಬಾಬು, ಮುರುಗಪ್ಪ ತಂದೆ ಕರಿಯಪ್ಪ, ಶ್ರೀನಿವಾಸ ತಂದೆ ರಾಮಣ್ಣ, ಶಿವಾನಂದ ತಂದೆ ಮಡಿವಾಳಪ್ಪ ಮಲ್ಲಿಕಾರ್ಜುನ ತಂದೆ ಯಲ್ಲಪ್ಪ ಹಾಗೂ ಸೋಮನಾಥ ಅವರು ಇಂದು ಬಿಡುಗಡೆಯಾದ ಕೈದಿಗಳು.
ಕೇಂದ್ರ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಲ್ಪಾವಧಿಯ ಶಿಕ್ಷೆಗೆ ಒಳಗಾದ ಮತ್ತು ಈಗಾಗಲೇ ಶೇ.66 ರಷ್ಟು ಶಿಕ್ಷೆ ಅವಧಿ ಮುಗಿಸಿರುವ ರಾಜ್ಯದ 81 ಜನ ಕೈದಿಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ಧಾರವಾಡದ ಆರು ಜನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.
Kshetra Samachara
16/08/2022 04:29 pm