ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಖೋಟಾ ನೋಟಿನ ಜಾಲ ಛೇದನ; ಮೂವರು ಯುವಕರ ಬಂಧನ

ಕುಂದಗೋಳ: ಖೋಟಾ ನೋಟಿನ ಬೃಹತ್ ಜಾಲವನ್ನು ಭೇದಿಸುವಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದು, ಆಗಸ್ಟ್ 6ರಂದು ಮೂವರು ಆರೋಪಿಗಳನ್ನು ಬಂಧಿಸಿ 500ರ ಮುಖಬೆಲೆಯ 47 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸಾಗರ್ ಈಶ್ವರಪ್ಪ ಕಾಶಪ್ಪನವರ (22) ಎಂಬಾತ ಪ್ರಮುಖ ಆರೋಪಿಯಾಗಿದ್ದು, ಖಾಸಗಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸುವ ವೇಳೆ 2ನೇ ಬಾರಿ ಖೋಟಾ ನೋಟು ನೀಡಿದಾಗ ಪೊಲೀಸ್ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಬಂಧಿತನ ತನಿಖೆ ವೇಳೆ 2ನೇ ಆರೋಪಿ ಗದಗ ಜಿಲ್ಲೆಯ ಹೂವಿನಗೋಳ ಗ್ರಾಮದ ಬಿಕಾಂ ವಿದ್ಯಾರ್ಥಿ ಅಜಿತ್ ಅಂಗಡಿ (21) ಹಾಗೂ ಅದೇ ಹೂವಿನ ಹಡಗಲಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ 3ನೇ ಆರೋಪಿ ವೀರೇಶ್ ಅಕ್ಕಿ (19) ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಕುಂದಗೋಳ ಗ್ರಾಮೀಣ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮೊದಲ ಆರೋಪಿ ಸಾಗರ್ ನಡೆಸುತ್ತಿದ್ದ ಬಾಡಿಗೆ ಕಟ್ಟಡದ ಆದಿತ್ಯ ಮಿಲ್ಕ್ ಮಳಿಗೆ ಮೇಲೆ ದಾಳಿ ನಡೆಸಿದಾಗ 23 ಸಾವಿರದ 500 ರೂ. ಗಳ ಖೋಟಾ ನೋಟು ಪತ್ತೆಯಾಗಿವೆ.

ಸದ್ಯ ಪ್ರಕರಣ ಗದಗ ಜಿಲ್ಲೆಯಿಂದ ಬಳ್ಳಾರಿಯವರೆಗೆ ಒಬ್ಬರಿಂದ ಒಬ್ಬರಿಗೆ ಸಂಪರ್ಕ ಹೊಂದಿದ್ದು, ಸಂಪೂರ್ಣ ತನಿಖೆಯನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸುತ್ತಿರುವ ಪೊಲೀಸರು, ಬಂಧಿತ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಹುಬ್ಬಳ್ಳಿಯ ಉಪ ಕಾರಾಗೃಹಕ್ಕೆ ತಳ್ಳಿದ್ದಾರೆ.

Edited By : Somashekar
Kshetra Samachara

Kshetra Samachara

08/08/2022 04:19 pm

Cinque Terre

37.07 K

Cinque Terre

1

ಸಂಬಂಧಿತ ಸುದ್ದಿ