ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಂತಾನಹರಣ ಚಿಕಿತ್ಸೆ ನೆಪದಲ್ಲಿ ನಾಯಿಗಳ ಮಾರಣಹೋಮ ಮಾಡುತ್ತಿದೆಯಾ ಪಾಲಿಕೆ?

ಧಾರವಾಡ: ಬೀದಿ ನಾಯಿಗಳ ಹಾವಳಿ ತಪ್ಪಿಸುವುದಕ್ಕೋಸ್ಕರ ಮಹಾನಗರ ಪಾಲಿಕೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೊಡುವುದು ಗೊತ್ತೇ ಇದೆ. ಆದರೆ, ಸಂತಾನಹರಣ ಚಿಕಿತ್ಸೆ ನೆಪದಲ್ಲಿ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ನಾಯಿಗಳ ಮಾರಣ ಹೋಮ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಹೌದು! ನವಲೂರಿನಲ್ಲಿ ಬೀದಿ ನಾಯಿ ದಾಳಿ ಮಾಡಿ ಬಾಲಕನೋರ್ವ ಸಾವನ್ನಪ್ಪಿದ್ದ. ಹೀಗಾಗಿ ಮಹಾನಗರ ಪಾಲಿಕೆ ಆಪರೇಷನ್ ಶ್ವಾನ ಆರಂಭಿಸಿದೆ. ಬೀದಿ ನಾಯಿಗಳನ್ನು ಹಿಡಿದು ತಂದು ಅವುಗಳ ಸಂತಾನಹರಣ ಮಾಡಿ ಮತ್ತೆ ಅವುಗಳನ್ನು ಬಿಡಲಾಗುತ್ತದೆ. ಆದರೆ, ಈ ಕೆಲಸದ ನೆಪದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನಾಯಿಗಳ ಕೈಕಾಲು, ಬಾಯಿ ಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ನಾಯಿಗಳು ಆಹಾರ ಸಿಗದೇ ನಿತ್ರಾಣ ಸ್ಥಿತಿ ತಲುಪುತ್ತಿವೆ.

ಈ ವಿಷಯ ತಿಳಿದ ಕೂಡಲೇ ಪ್ರಾಣಿಪ್ರಿಯ ಸೋಮು ಎಂಬುವವರು ಸ್ಥಳಕ್ಕೆ ಹೋಗಿ ನಾಯಿಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅವುಗಳ ಆರೈಕೆ ಮಾಡಿದ್ದಾರೆ.

ಈ ವಿಷಯವನ್ನು ಪಬ್ಲಿಕ್ ನೆಕ್ಸ್ಟ್ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರ ಗಮನಕ್ಕೆ ತಂದಾಗ, ನಾಯಿಗಳ ಕೈ, ಕಾಲು ಕಟ್ಟಿ ಬಿಸಾಕುವುದು ತಪ್ಪು. ಈಗಲೇ ಝೋನಲ್ ಅಧಿಕಾರಿಗಳಿಗೆ, ನಾಯಿಗಳ ಕಟ್ಟು ಬಿಚ್ಚಲು ಸೂಚನೆ ನೀಡುತ್ತೇನೆ. ನಾಯಿಗಳ ಸಂಖ್ಯೆ ಹೆಚ್ಚಾಗದಂತೆ ಅವುಗಳ ಸಂತಾನಹರಣ ಮಾಡಿ ಮರಳಿ ಬಿಡಲು ಸೂಚನೆ ನೀಡುತ್ತೇನೆ ಎಂದಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/07/2022 04:14 pm

Cinque Terre

252.79 K

Cinque Terre

74

ಸಂಬಂಧಿತ ಸುದ್ದಿ