ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಲ್ಲೆಗೊಳಗಾದ ಮಹಿಳೆಯ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ: ಲವ್ ಜಿಹಾದ್ ಹೆಸರಲ್ಲಿ ವಂಚನೆಗೆ ಕಠಿಣ ಶಿಕ್ಷೆ

ಗದಗ ಜಿಲ್ಲೆಯ ಮುಂಡರಗಿಯಲ್ಲಿ ಅನ್ಯಧರ್ಮಿಯ ಪತಿಯಿಂದ ಹಲ್ಲೆಗೆ ಒಳಗಾದ ‌ಹಿಂದೂ ಧರ್ಮದ ಯುವತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ಮಾಡಿ ಧೈರ್ಯ ತುಂಬಿದರು.

ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಅಪೂರ್ವ ಪುರಾಣಿಕ ಎಂಬುವ ಮಹಿಳೆಯ ಆರೋಗ್ಯ ವಿಚಾರಿಸಿದರು. ಅಲ್ಲದೇ ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯವಾಗಿರುವಂತೆ ಹೇಳಿದರು. ಅಲ್ಲದೇ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಚನ್ನಾಗಿ ಆರೈಕೆ ಮಾಡುವಂತೆ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿಯೇ ವಿಚಾರಿಸಿ ಸೂಕ್ತ ಸಲಹೆ ನೀಡಿದರು.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗದಗ ಜಿಲ್ಲೆಯಲ್ಲಿ ನಡೆದ ಯುವತಿಯ ಮೇಲೆ ನಡೆದ ಹಲ್ಲೆಯು ಚರ್ಚಿತ ವಿಷಯ ಲವ್ ಜಿಹಾದ್ ಎಂಬುವುದು ಕಂಡು ಬರುತ್ತಿದೆ. ಅಲ್ಲದೆ ವಿದ್ಯಾವಂತ ಯುವತಿಯರು ಇಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.

ಮೊದಲೇ ಮದುವೆಯಾಗಿ ಹಿಂದೂ ಯುವತಿಗೆ ಮೋಸ ಮಾಡಿದ್ದು, ಕೇವಲ ವಿಚ್ಚೇದನ ಅರ್ಜಿ ಹಾಕಿದ ಕಾರಣಕ್ಕೆ ಈ ರೀತಿಯಲ್ಲಿ ಹಲ್ಲೆ ಮಾಡಿರುವುದು ಖಂಡನೀಯ ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಇತ್ತೀಚೆಗೆ ಚರ್ಚೆ ನಡೆಯುತ್ತಿರುವ ಲವ್ ಜಿಹಾದ್ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕಿದೆ. ಮೊದಲು ಮದುವೆಯಾಗಿದ್ದರೂ ಮತ್ತೇ ಹಿಂದೂ ಯುವತಿಯರನ್ನು ವಂಚನೆ ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿದೆ ಎಂದು ಆಗ್ರಹಿಸಿದರು.

ಈಗಾಗಲೇ ಮಾಧ್ಯಮದ ಮೂಲಕ ಸಾಕಷ್ಟು ಪ್ರಚಾರ ಆಗಿದೆ. ಇನ್ನೂ ಪ್ರಚಾರ ಆಗಬೇಕು ಅಂದಾಗ ಯುವ ಸಮುದಾಯ ಎಚ್ಚೇತ್ತುಕೊಂಡು ಇಂತಹ ದುಷ್ಕೃತ್ಯಗಳಿಗೆ ಬಲಿಯಾಗುವುದು ಕಡಿಮೆಯಾಗುತ್ತದೇ ಎಂದು ಅವರು ಹೇಳಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/03/2022 04:07 pm

Cinque Terre

106.89 K

Cinque Terre

18

ಸಂಬಂಧಿತ ಸುದ್ದಿ