ಅಣ್ಣಿಗೇರಿ : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರುವ ಸರ್ಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಅಂಗಡಿಗಳಿಗೆ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ ಇಂದು ಬೆಳ್ಳಂ ಬೆಳಿಗ್ಗೆ ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತದಿಂದ ಪಾರವಾನಿಗಿ ಪಡೆದಿರುವದು ಒಂದು ಕಡೆಯಾದರೆ, ಕಟ್ಟಡ ನಿರ್ಮಿಸಿರುವದು ಸರ್ಕಾರಿ ಜಾಗದಲ್ಲಿ ಆದ್ದರಿಂದ ಇಂತಹ ಕಟ್ಟಡಗಳಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರುವುಗೊಳಿಸಬೇಕು ಎಂದು ಮಾಲೀಕರಿಗೆ ಬೀಗಿ ಹಾಕಿದರು. ಅಷ್ಟೇ ಅಲ್ಲದೇ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರುವು ಗೊಳಿಸುವವರೆಗೂ ಅಂಗಡಿಗಳ ಬಾಗಿಲನ್ನು ತೆರೆಯುವಂತಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದು ಅತಿಕ್ರಮಣಗೊಂಡ ಜಾಗ ಪರೀಶಿಲನೆ ಮಾಡುತ್ತಿದ್ದಂತಯೇ ಸಂಬಂಧಿಸಿದ ಮಾಲೀಕರು ಹಾಗೂ ಬಾಡಿಗೆದಾರರು ಸೇರಿಕೊಂಡು ಪ್ರೊಬೇಷನರಿ ತಹಶೀಲ್ದಾರ ಜೋತೆ ವಾಗ್ವಾದಕ್ಕೆ ಇಳಿದರು. ಇಂದು ಅಂಗಡಿಗಳನ್ನು ತೆರುವುಗೊಳಿಸದಿದ್ದರೆ ಪುರಸಭೆ ಯ ಜೆಸಿಬಿ ಯಿಂದ ನಾವೇ ಸ್ವತ: ತೆರುವುಗೊಳಿಸುತ್ತೇವೆ ಎಂದು ತಹಶೀಲ್ದಾರ ಮಾಧವ ಗಿತ್ತೆ ಅಂಗಡಿ ಮಾಲಿಕರಿಗೆ ತಿಳಿಸಿ ನಿರ್ಗಮಿಸಿದರು.
Kshetra Samachara
24/11/2021 12:49 pm