ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಡಿಸಿಯವ್ರೇ ನಿಮ್ಮ ಅಂಗರಕ್ಷಕರು ಹಲ್ಲೆ ಮಾಡಿದ್ರಾ? ಏನಿದು ಆರೋಪ?

ಕುಂದಗೋಳ: ಜಿಲ್ಲಾಧಿಕಾರಿ ಅಂಗರಕ್ಷಕರೇ ಸಾರ್ವಜನಿಕರ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಜಿಲ್ಲಾಧಿಕಾರಿ ನೇತೃತ್ವದ ತಂಡವು ಅಕಾಲಿಕ ಮಳೆಯಿಂದ ಹಾನಿಗೊಳಗಾದ ಪ್ರದೇಶ ವೀಕ್ಷಿಸಲು ಹರ್ಲಾಪೂರಕ್ಕೆ ಹೊರಟಿತ್ತು. ಈ ವೇಳೆ ಗುಡಗೇರಿ ಅಂಬೇಡ್ಕರ್ ಕಾಲೋನಿಯ ಜನತೆ ತಡೆದು ತಮ್ಮ ಸಮಸ್ಯೆ ಹೇಳಲು ಮುಂದಾಗಿದ್ದಾರೆ. ಆದರೆ 'ನಮ್ಮ ಮಾತನ್ನು ಆಲಿಸದೆ ಜಿಲ್ಲಾಧಿಕಾರಿ ಅಂಗರಕ್ಷಕರು ಏಕಾಏಕಿ ತಮ್ಮ ಹಲ್ಲೇ ಮಾಡಿದ್ದಾರೆ' ಎಂದು ಅಂಬೇಡ್ಕರ್ ಕಾಲೋನಿಯ ಜನತೆ ಹಾಗೂ ಪಂಚಾಯಿತಿ ಸದಸ್ಯ ವಿನಾಯಕ ಮನ್ನಾಳಕೇರಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಠಾಣಾ ಎದುರು ಜಮಾಯಿಸಿ ನ್ಯಾಯ ಕೇಳಿದ ಪ್ರಸಂಗ ನಿನ್ನೆ ರಾತ್ರಿ ನಡೆದಿದೆ.

ನಮ್ಮ ಮೇಲೆ ಹಲ್ಲೆಯಾಗಿದೆ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಗುಡಗೇರಿ ಪೊಲೀಸ್ ಠಾಣೆ ಎದುರು ತಡರಾತ್ರಿ ಜಮಾಯಿಸಿದ ಜನರು, ಡಿಸಿ ಅಂಗರಕ್ಷಕರ ವಿರುದ್ಧ ದೂರು ನೀಡಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸಿಪಿಐ ದೇಶನೂರ ಅವರು ಸಮಸ್ಯೆ ತಿಳಿಗೊಳಿಸಿ, ಈ ವಿಷಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾಪ ಮಾಡಿ ಪುನಃ ನಿಮ್ಮ ಮನೆ ಹಾನಿ ಕುರಿತು ಪರಿಶೀಲನೆಗೆ ತಿಳಿಸುತ್ತೇವೆ ಎಂದು ಮನವಿ ಮಾಡಿಕೊಂಡರು. ಆಗ ಅಂಬೇಡ್ಕರ್ ಕಾಲೋನಿಯ ಜನತೆ ನಮ್ಮ ಮನೆ ಪರಿಶೀಲನೆ ಜೊತೆಗೆ ಜಿಲ್ಲಾಧಿಕಾರಿ ಅಂಗರಕ್ಷಕರ ಮೇಲೆಯೂ ಕ್ರಮ ಜರುಗದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಸಹ ನೀಡಿದ್ದಾರೆ.

ಇದಲ್ಲದೆ ಇಂದು ಬೆಳಿಗ್ಗೆ ಅಂಬೇಡ್ಕರ್ ಕಾಲೋನಿಯ ಮಹಿಳೆಯರು ಸಹ ತಮ್ಮ ಮನೆ ನೋಡಿ ಪರಿಹಾರ ಕೊಡುವಂತೆ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗುತಿದ್ದಾರೆ.

ಅಂಬೇಡ್ಕರ್ ಕಾಲೋನಿ ಜನರ ಆರೋಪ ಮತ್ತು ಸಮಸ್ಯೆ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/11/2021 02:17 pm

Cinque Terre

32.7 K

Cinque Terre

1

ಸಂಬಂಧಿತ ಸುದ್ದಿ