ಗದಗ : ನಗರದ ರಿಂಗ್ ರಸ್ತೆ ಬಾಲಾಜಿ ನಗರ ಕ್ರಾಸ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ ಐವರನ್ನು ಸೆ.30 ರಂದು ಗದಗ ಶಹರ ಪೊಲೀಸರು ಬಂಧಿಸಿ ಆರೋಪಿಗಳಿಂದ 1.55 ಲಕ್ಷ ರೂ. ನಗದು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಲಾಜಿ ನಗರದ ಶ್ರೀನಿವಾಸ ವಿಶ್ವನಾಥಸಾ ಹಬೀಬ, ಕೇಶವ ನಗರದ ಅಲ್ತಾಫ್ ಮಾಬುಸಾಬ ತಹಶೀಲ್ದಾರ, ಕಿಲ್ಲಾ ಓಣಿಯ ಸಾಗರ ನಾರಾಯಣಸಾ ಪವಾರ, ದಾಸರ ಓಣಿಯ ವಿನಾಯಕ ಭೀಮಸೇನಸಾ ಶಿದ್ಲಿಂಗ್, ಒಕ್ಕಲಗೇರಿ ಓಣಿಯ ಪ್ರಕಾಶ ಲಕ್ಷ್ಮಣಸಾ ಬದಿ ಬಂಧಿತ ಆರೋಪಿಗಳು.
ಬಂಧಿತರು ಸೆ.30 ರಂದು ಸಂಜೆ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಕೆಕೆಆರ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಸ್ಕೋರ್ ಮತ್ತು ಫಲಿತಾಂಶದ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಡಿಎಸ್‌ಪಿ ಪ್ರಲ್ಹಾದ ಎಸ್.ಕೆ. ಮಾರ್ಗದರ್ಶನದಲ್ಲಿ ಗದಗ ಶಹರ ಸಿಪಿಐ ಪಿ.ವ್ಹಿ.ಸಾಲಿಮಠ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ನಗದು ಹಣ ಹಾಗೂ ಮೊಬೈಲ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Kshetra Samachara
01/10/2020 04:10 pm