ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮುಖ್ಯಶಿಕ್ಷಕನ ದುರ್ವರ್ತನೆಗೆ ಮೇಲಾಧಿಕಾರಿಗಳ ಸಾಥ್!;‌ ಶಿಕ್ಷಕಿ ಕಣ್ಣೀರು, ಸಿಡಿದೆದ್ದ ಯುವಕ

ಕಲಘಟಗಿ: ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸರಕಾರಿ ಶಾಲೆಯೊಂದರಲ್ಲಿ ಮಹಿಳಾ ಶಿಕ್ಷಕಿಯ ಜತೆ ಮುಖ್ಯೋಪಾಧ್ಯಾಯ ಅಸಭ್ಯ ವರ್ತನೆ ತೋರಿರುವ ಹಿನ್ನೆಲೆಯಲ್ಲಿ ಮಹಿಳಾ ಶಿಕ್ಷಕಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಆದರೆ, ಅಧಿಕಾರಿಗಳು ಮುಖ್ಯೋಪಾಧ್ಯಾಯನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮರಳಿ ಬಡಪಾಯಿ ಶಿಕ್ಷಕಿಯ ಮೇಲೆಯೇ ಕ್ರಮ ತೆಗೆದುಕೊಂಡಿರುವುದರಿಂದ ಸಾಮಾಜಿಕ ಹೋರಾಟಗಾರ ಶಂಕರ ಹುದ್ದಾರ ಎಂಬ ಯುವಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರುಗಡೆ 7 ದಿನಗಳಿಂದ ಆಮರಣ ಉಪವಾಸ ಕೈಗೊಂಡಿದ್ದಾರೆ.

ಇದುವರೆಗೂ ಅಧಿಕಾರಿಗಳು ಆ ಮುಖ್ಯಶಿಕ್ಷಕನ ವಿರುದ್ಧ ಕ್ರಮ ಕೈಗೊಳುತ್ತಿಲ್ಲ. ಅದರ ಬದಲಾಗಿ ಮಹಿಳಾ ಶಿಕ್ಷಕಿಯ ವೇತನವನ್ನು ತಡೆ ಹಿಡಿದಿದ್ದಾರೆ ಎಂದು ಶಂಕರ ಹುದ್ದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಶಿಕ್ಷಕಿಗೆ ನ್ಯಾಯ ದೊರಕುವವರೆಗೂ ಈ ಹೋರಾಟ ಕೈ ಬಿಡಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

13/07/2022 12:25 pm

Cinque Terre

50.21 K

Cinque Terre

3

ಸಂಬಂಧಿತ ಸುದ್ದಿ