ಧಾರವಾಡದಲ್ಲಿ ಮನೆ ಹಿತ್ತಲಲ್ಲಿ ಗಾಂಜಾ ಬೆಳೆದು ಸಿಕ್ಕು ಬಿದ್ದ ಭೂಪ

ಧಾರವಾಡ: ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ರಾಮನಗೌಡ ಪಾಟೀಲ ಎಂಬಾತ ಯಾರಿಗೂ ಗೊತ್ತಾಗದ ಹಾಗೆ ತನ್ನ ಮನೆಯ ಹಿತ್ತಲಿನಲ್ಲೇ ಗಾಂಜಾ ಸಸಿ ಬೆಳೆದಿದ್ದ.

ಈ ವಿಷಯ ತಿಳಿದ ಧಾರವಾಡ ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಸುಮಾ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದೀಗ ರಾಜ್ಯದೆಲ್ಲೆಡೆ ಗಾಂಜಾ ಹಾಗೂ ಡ್ರಗ್ಸ್ ಪ್ರಕರಣ ಕಾವು ಪಡೆದುಕೊಂಡಿದ್ದು, ಗಾಂಜಾ ಮಾರಾಟಗಾರರ ಮೇಲೆ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.

ರಾಮನಗೌಡ ತನ್ನ ಮನೆಯ ಹಿತ್ತಲಿನಲ್ಲೇ ಗಾಂಜಾ ಬೆಳೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನಿಂದ 2 ಕೆಜಿ 650 ಗ್ರಾಂ ಗಾಂಜಾ ತಪ್ಪಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Kshetra Samachara

Kshetra Samachara

11 days ago

Cinque Terre

50.45 K

Cinque Terre

1

  • sunil
    sunil

    very good job 🙏🙏🙏