ಧಾರವಾಡ: ಧಾರವಾಡದ ಮಾನಸಿಕ ಆಸ್ಪತ್ರೆ ಮತ್ತೊಂದು ಅದ್ವಾನಕ್ಕೆ ಸಾಕ್ಷಿಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುವವರಷ್ಟೇ ಅಲ್ಲಿ ಇರ್ತಾರೆ ಅಂದುಕೊಂಡ್ರಾ? ಹಾಗಿದ್ದರೆ ಅಲ್ಲಿ ನಡೆಯುತ್ತಿರುವುದಾದರೂ ಏನು ಅಂತಾ ಗೊತ್ತಾಗಬೇಕಾ? ಈ ಸ್ಟೋರಿ ನೋಡಿ.
ಮಲೇಶಿಯಾ ಮೂಲದ ಸದ್ಯ ಮಥುರೈ ನಿವಾಸಿಯಾಗಿ ಹುಬ್ಬಳ್ಳಿಯಲ್ಲಿ ಹರ್ಬಲ ಉತ್ಪಾದನೆಯ ವ್ಯಾಪಾರ ನಡೆಸುತ್ತಿರುವ ಸೆಲ್ವಿ ಎಂಬಾಕೆಯನ್ನು ಮಾನಸಿಕ ಖಿನ್ನತೆ ನೆಪದ ಮೇಲೆ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಆರೋಗ್ಯವಾಗಿರುವ ಸೆಲ್ವಿ ಎಂಬಾಕೆಗೆ ಹುಬ್ಬಳ್ಳಿ ಮೂಲದ ಸುಂದರರಾಜನ್ ಎಂಬುವವರ ಪರಿಚಯವಾದ ಮೇಲೆ ಸೆಲ್ವಿ ಆತನೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.
ಹರ್ಬಲ ವ್ಯಾಪಾರ ಜೋರಾಗುತ್ತಿದ್ದಂತೆ ಇಬ್ಬರ ನಡುವೆ ಬಿರುಕು ಸೃಷ್ಟಿಯಾಗಿದೆ. ಈ ಮಧ್ಯೆ ಸುಂದರರಾಜನ್ ಎಂಬಾತ ಸೆಲ್ವಿಗೆ ಐಸ್ ಕ್ರೀಂ ನಲ್ಲಿ ಮತ್ತು ಬರುವ ಔಷಧ ಸೇರಿಸಿ ಆಕೆಯನ್ನು ಧಾರವಾಡದ ಮಾನಸಿಕ ಆಸ್ಪತ್ರೆಗೆ ತಂದು 2019 ನವೆಂಬರ 9 ರಂದು ದಾಖಲು
ಮಾಡುತ್ತಾನೆ.
ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಪ್ರಕರಣ ಬೇರೊಂದು ತಿರುವು ಪಡೆದುಕೊಂಡಿದೆ.
ಈ ಮಧ್ಯೆ ಎರಡೆರಡು ಬಾರಿ ಮಾನಸಿಕ ಆಸ್ಪತ್ರೆಯಲ್ಲಿ ಸೆಲ್ವಿಯ ಕೌನ್ಸಿಲಿಂಗ್ ನಡೆಯುತ್ತದೆ. ನನ್ನ ಆಸ್ತಿಯನ್ನು ಲಪಟಾಯಿಸಲು, ನನಗೆ ಹುಚ್ಚರ ಪಟ್ಟ ಕಟ್ಟಲು ಈ ರೀತಿ ಷ್ಯಡ್ಯಂತ್ರ ನಡೆಸಲಾಗಿದೆ ಎಂದು ಸೆಲ್ವಿ ಎಷ್ಟೆ ಹೇಳಿದರೂ ಸಹ
ಅಲ್ಲಿನ ವೈದ್ಯರು ಆಕೆಯ ಹೇಳಿಕೆಯನ್ನು ಪರಿಗಣಿಸಲ್ಲ ಎಂಬ ಆರೋಪ ಕೇಳಿ ಬಂದಿದೆ.ಈ ಮಧ್ಯೆ ಈ ಪ್ರಕರಣ ಕೋರ್ಟ ಮೆಟ್ಟಲೇರುತ್ತೆ. ಮಥುರೈ ಮೂಲದ ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿರುವ ಸೆಲ್ವಿಯನ್ನು ಮಾನಸಿಕ ಖಿನ್ನತೆ ನೆಪದಲ್ಲಿ ಆಕ್ರಮವಾಗಿ ಕೂಡಿ ಹಾಕಲಾಗಿದೆ
ಎಂದು ವಕೀಲೆ ಸುಧಾ ಕಾಟವಾ, ಆಕೆಯೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಬೇಕೆಂದು ನ್ಯಾಯಾಲಯದಿಂದ ಪರವಾನಿಗೆ ಪಡೆದು ಆಸ್ಪತ್ರೆಗೆ ಬಂದಾಗ ಅಲ್ಲಿ ಹೈಡ್ರಾಮಾ ನಡೆದಿದೆ.
ಆಸ್ಪತ್ರೆಗೆ ಬಂದ ವಕೀಲೆ ಸುಧಾ ಮತ್ತು ಆಕೆಯ ಜೊತೆಗಿದ್ದವರನ್ನು ಅಲ್ಲಿನ ವೈದ್ಯರು ಆಸ್ಪತ್ರೆಯಿಂದ ಹೊರಹಾಕಿದ್ದು, ಸುಧಾ ಎಂಬುವವರು ಅಲ್ಲಿನ ವೈದ್ಯರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗದಿದ್ದರೂ ಮಹಿಳೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.
Kshetra Samachara
25/12/2020 04:34 pm