ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಸ್ ನಿಲ್ದಾಣದಲ್ಲಿ ಹೊಡೆದ್ರು.. ಇವ್ನು ಮನೆಗೆ ಬಂದು ವಿಷ ಕುಡಿದ

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಪಂಚಾಯ್ತಿ ಚುನಾವಣೆಗೆ ನಿಂತಿದ್ದ ವ್ಯಕ್ತಿಯೋರ್ವ ನಿನ್ನೆಯಷ್ಟೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇದೀಗ ಅದೇ ಗ್ರಾಮದಲ್ಲಿ ಪಂಚಾಯ್ತಿ ಚುನಾವಣೆಗೆ ಎರಡನೇ ಬಾರಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಇಕ್ಬಾಲ್ ಹುಸೇನ್ ಚೋಪದಾರ ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಇವನ ಪತ್ನಿ ಗರಗ ಗ್ರಾಮದ 3ನೇ ವಾರ್ಡಿನಿಂದ ಪುನರಾಯ್ಕೆ ಬಯಸಿ ಚುನಾವಣೆಗೆ ನಿಂತಿದ್ರಂತೆ. ಇಕ್ಬಾಲ್ ಅದೇ ಗ್ರಾಮದ ಮತ್ತೊಂದು ಮುಸ್ಲಿಂ ಕುಟುಂಬದ ಬಳಿ ಸಾಲ ಪಡೆದುಕೊಂಡಿದ್ನಂತೆ. ಆ ಕುಟುಂಬದ ಸದಸ್ಯರು ಕೊಟ್ಟ ಸಾಲ ಕೊಡು ಎಂದು ಇಂದು ಬಸ್ ನಿಲ್ದಾಣದಲ್ಲಿ ಇಕ್ಬಾಲ್ ನನ್ನು ಥಳಿಸಿದ್ದಾರಂತೆ ಇದರಿಂದ ಮನನೊಂದ ಇಕ್ಬಾಲ್ ಮನೆಗೆ ಬಂದು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅವರನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು, ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

23/12/2020 08:42 pm

Cinque Terre

98.57 K

Cinque Terre

2

ಸಂಬಂಧಿತ ಸುದ್ದಿ