ಧಾರವಾಡ: ಗ್ರಾಮ ಪಂಚಾಯತಿ ಲೋಕಲ್ ವಾರ್ ತುರುಸಿನಿಂದ ನಡೆದಿದೆ. ಒಂದೆಡೆ ಮತದಾನ ಸರಾಗವಾಗಿ ನಡೀತಾ ಇದ್ರೆ ಇನ್ನೊಂದೆಡೆ ಮತಗಟ್ಟೆಯ ಪಕ್ಕದಲ್ಲೇ ಅಭ್ಯರ್ಥಿಗಳ ಫೋಟೋ ಸಮೇತ ಮಾಡಲಾದ ವಾಮಾಚಾರದ ಗೊಂಬೆ ಪತ್ತೆಯಾಗಿದೆ.
ಹೌದು! ಇಂತದ್ದೊಂದು ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಕಪ್ಪು ಬಟ್ಟೆಯಿಂದ ಮಾಡಿದ ಭೂತದ ಗೊಂಬೆಗೆ ಸುಮಾರು ನಾಲ್ಕೈದು ಅಭ್ಯರ್ಥಿಗಳ ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಕಟ್ಟಿ ವಾಮಾಚಾರ ಮಾಡಲಾಗಿದೆ. ಈ ವಾಮಾಚರದ ಗೊಂಬೆಯನ್ನು ಕೋಟೂರು ಗ್ರಾಮದ ಮತಗಟ್ಟೆ ಕೇಂದ್ರವಾದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ದುಷ್ಕರ್ಮಿಗಳು ಎಸೆದಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿಗಳಾದ ದಾದಾಪೀರ್ ಗಾಂಜಿ, ಪ್ರವೀಣ ಕಮ್ಮಾರ, ವಿಠ್ಠಲ ಕಳ್ಳಿಮನಿ, ಬಸಪ್ಪ ಇಂಗಳಗಿ ಸೇರಿದಂತೆ ಇತರ ಅಭ್ಯರ್ಥಿಗಳ ಫೋಟೊಗಳನ್ನು ವಾಮಾಚಾರದ ಗೊಂಬೆಗೆ ಕಟ್ಟಲಾಗಿದೆ. ಇದರ ಬಗ್ಗೆ ತನಿಖೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
22/12/2020 10:43 am