ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ವಾಮಾಚಾರ ಹಾಗೂ ದೇವರ ಮೊರೆ ಹೋದ ಅಭ್ಯರ್ಥಿಗಳು

ಕಲಘಟಗಿ:ಮೊದಲ‌ ಹಂತದ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕಲಘಟಗಿ ತಾಲೂಕಿನ ಹಲವು ಮತಗಟ್ಟೆಗಳಲ್ಲಿ ವಾಮಾಚಾರ ನಡೆದಿದೆ.

ಮುಕ್ಕಲ ಗ್ರಾಮದಲ್ಲಿ ನಿಂಬೆಹಣ್ಣು ಇಟ್ಟು, ಅಭ್ಯರ್ಥಿ ಗಳ ಹೆಸರು ಬರೆದು ವಾಮಾಚಾರ ಮಾಡಲಾಗಿದೆ.

ಗೆಲುವಿಗಾಗಿ ಕೊನೆಯ ಕಸರತ್ತು ನಡೆಸಿದ‌ ಕೆಲ ಅಭ್ಯರ್ಥಿಗಳು,ದೇವಸ್ಥಾನಗಳ‌ ಮುಂದೆ ತಮ್ಮ ಕರ ಪತ್ರ ಹಾಕಿ ದೇವರ ಮೊರೆ ಹೋಗಿದ್ದಾರೆ, ಇನ್ನೂ ಕೆಲವರು ವೋಟಿಗಾಗಿ ವಾಮಾಚಾರದ ಮೊರೆ ಹೋಗಿರುವುದು ಪ್ರಜ್ಞಾವಂತ ಮತದಾರ ರಲ್ಲಿ ಅಚ್ಚರಿ‌ ಮೂಡಿಸಿದೆ.

ಮತದಾನಕ್ಕೆ ಮೊದಲು ಮತಗಟ್ಟೆ ಅಕ್ಕಪಕ್ಕದಲ್ಲಿ ವಾಮಾಚಾರ ಮಾಡಲಾಗಿದೆ.ಕಳೆದ ರಾತ್ರಿ ಮಿಶ್ರಿಕೋಟಿಯಲ್ಲೂ ಇಂತಹ ಘಟನೆ ಜರುಗಿದೆ.

Edited By : Nagesh Gaonkar
Kshetra Samachara

Kshetra Samachara

22/12/2020 10:21 am

Cinque Terre

49.09 K

Cinque Terre

0

ಸಂಬಂಧಿತ ಸುದ್ದಿ