ಹುಬ್ಬಳ್ಳಿ: ಮಿಶ್ರಿಕೋಟಿ ಗ್ರಾಮ ಪಂಚಾಯತಿ ಚುನಾವಣೆಯ 2020 ರ ಅಂಗವಾಗಿ, ಅಭ್ಯರ್ಥಿಗಳ ಚುನಾವಣಾ ಪ್ರಚಾರ ಅತ್ಯಂತ ಚುರುಕುನಿಂದ ನಡೆಯುತ್ತಿದೆ. ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಹಲವು ರೀತಿಯಾದ ಕಸರತ್ತು ನಡೆಸುತ್ತಿದ್ದಾರೆ.
ಅಭ್ಯರ್ಥಿಗಳ ಭಾವಚಿತ್ರ ಇರುವ ಕರಪತ್ರಗಳನ್ನು ಮತದಾರರಿಗಷ್ಟೆ ಅಲ್ಲದೆ, ದೇವಸ್ಥಾನದಲ್ಲಿರುವ ದ್ಯಾಮವ್ವ ದುರ್ಗವ ಮೂರ್ತಿಗಳ ಉಡಿಯಲ್ಲಿಟ್ಟು, ಅಷ್ಟಲ್ಲದೆ ಆಂಜನೇಯ ದೇವಾಲಯದ ಆವರಣದಲ್ಲಿ ಎಸೆದು ಬರುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ. ಅಂತು ಇಂತು ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿರುವುದು ಸಾಮಾನ್ಯ...
ಆದರೆ ಊರಿನ ಕೆಲವು ವಾರ್ಡ್ ಗಳಲ್ಲಿನ ಅಭ್ಯರ್ಥಿಗಳು, ಹೊರವಲಯದ ಮೂರು ಮೂಲಿಯ ಕ್ರಾಸ್ ಗಳ ರಸ್ತೆಯ ಮೇಲೆ, ನಿಂಬೆಹಣ್ಣು ಬೂದು ಕುಂಬಳಕಾಯಿ, ಅರಿಸಿಣ ಕುಂಕುಮ ಇನ್ನಿತ್ತರೆ ಸಾಮಗ್ರಿಗಳನ್ನು ಇಟ್ಟು ವಾಮಾಚಾರ ಆಟ ಶುರು ಮಾಡಿಕೊಂಡಿದ್ದು, ಈ ಸಮಯದಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಅಲ್ಲದೆ ಹೆಚ್ಚಾಗಿ ಮೂರನೇ ವಾರ್ಡಿಗೆ ಸಂಭದಿಸಿದ ಅಭ್ಯರ್ಥಿಗಳ ಮನೆಯ ಮುಂದೆ ಅರಿಸಿಣ ಕುಂಕುಮ ಹಚ್ಚಿದ ನಿಂಬೆಹಣ್ಣು ರಾತ್ರಿಯ ವೇಳೆ ಇಡಲಾಗಿದೆ. ಅವುಗಳ ಚಿತ್ರವನ್ನು ಪಬ್ಲಿಕ್ ನೆಕ್ಸ್ಟ್ ನೀಡಿದ್ದಾರೆ.....
Kshetra Samachara
21/12/2020 09:26 pm