ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಪೊಲೀಸರು ಕಾರ್ಯಾಚರಣೆ ಮೂಲಕ ಅವಳಿನಗರದ ಜನತೆಗೆ ವಂಚಿಸಿ ಬಂಗಾರ ಕಳ್ಳತನ ಮಾಡುತ್ತಿದ್ದ ಚಿನ್ನ ಚೋರನನ್ನು ವಶಕ್ಕೆ ಪಡೆಯುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಖಾಕಿ ಪಡೆ ಯಶಸ್ವಿಯಾಗಿದೆ.
ಸಾರ್ವಜನರಿಕರಿಗೆ ನಂಬಿಸಿ ವಂಚನೆ ಮಾಡುತ್ತಿದ ಆಸಾಮಿ ನಿಮ್ಮ ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡ್ತಿನಿ,ಕಲರ್ ಪಾಲೀಷ್ ಮಾಡ್ತಿನಿ ಅಂತ ಮೋಸ ಮಾಡುತ್ತಿದ್ದ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುನಿಲ್ ಪತ್ತಾರ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನಿಂದ 20 ಲಕ್ಷ ಮೌಲ್ಯದ 330 ಗ್ರಾಂ ಚಿನ್ನಾಭರಣ ಹಾಗೂ 3,56 ಲಕ್ಷ ನಗದು ಜಪ್ತಿ ಮಾಡಲಾಗಿದೆ.
ವಂಚಕನ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆ ಖಚಿತ ಮಾಹಿತಿ ಮೇರಗೆ ದಾಳಿ ನಡೆಸಿದ ಪೊಲೀಸರು
ಚಿನ್ನಾಭರಣ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/12/2020 03:15 pm