ಧಾರವಾಡ: ಧಾರವಾಡದ ಸತ್ತೂರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಧಾರವಾಡದ ಜಿಲ್ಲೆಯ ದೇವರಗುಡಿಹಾಳದ ಮೆಹಬೂಬಸಾಬ್ ಸವಣೂರ, ಕಲಘಟಗಿಯ ಕೃಷ್ಣಪ್ಪ ಲಮಾಣಿ ಹಾಗೂ ಮುರ್ಕವಾಡ ಗ್ರಾಮದ ಅರ್ಜುನ ಮಾಚಕ ಎಂಬುವವರೇ ಬಂಧಿತ ಆರೋಪಿಗಳು. ಶ್ರೀಗಂಧದ ಮರಗಳನ್ನು ಕಡಿದು ತುಂಡು ತುಂಡಾಗಿ ಮಾಡಿ ಸಾಗಿಸುತ್ತಿದ್ದ ವೇಳೆ ಈ ಖದೀಮರು ಸಿಕ್ಕಿಬಿದ್ದಿದ್ದಾರೆ. ಸುಮಾರು 71 ಕೆಜಿಯಷ್ಟು ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
Kshetra Samachara
14/12/2020 09:18 pm