ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಪುಂಡ ಪೊಕರಿಗಳ ಹಾವಳಿ...

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪುಂಡ ಪೊಕರಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹೆಗ್ಗೇರಿ ಮಾರುತಿ ಕಾಲೋನಿಯಲ್ಲಿ ತಡರಾತ್ರಿ ಮಹಿಳೆಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮದ್ಯ ಸೇವನೆ ಮಾಡಿ ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದಾರೆ.

ರಾಕೇಶ, ಸಚಿನ್ ಹೆಬ್ಬಳ್ಳಿ ಎಂಬುವವರೇ ಮಹಿಳೆಯರ ಜೊತೆಗೆ ಅನುಚಿತ ವರ್ತನೆ ನಂತರ ಪುಂಡಾಟ ನಡೆಸಿದ್ದಾರೆ ಎಂದು ಮಹಿಳೆಯರು ಆರೊಪಿಸಿದ್ದಾರೆ.

ತೆಲೆ, ಭುಜಕ್ಕೆ ಹೊಡೆದಿದ್ದಾರೆ. ಇದರಿಂದ ಮಹಿಳೆಯರು ರಕ್ತಸ್ರಾವದಿಂದ ಬೀದಿಯಲ್ಲಿಯೇ ಬಿದ್ದರು ಸ್ಥಳೀಯರು ರಕ್ಷಣೆಗೆ ಬಂದಿಲ್ಲ.

ಮೇಲಿಂದ ಮೇಲೆ ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿವೆ. ಈ ಬಗ್ಗೆ ಮಹಿಳೆಯರು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

14/12/2020 01:53 pm

Cinque Terre

82.3 K

Cinque Terre

19

ಸಂಬಂಧಿತ ಸುದ್ದಿ