ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಆರ್ ಟಿಎಸ್ ಬಸ್ ಚಾಲಕನ ಮೇಲೆ ಹಲ್ಲೆ

ಧಾರವಾಡ: ಧಾರವಾಡದ ಬಿಆರ್ ಟಿಎಸ್ ಬಸ್ ಚಾಲಕನ ಮೇಲೆ ಕಾರು ಚಾಲಕನೋರ್ವ ಹಲ್ಲೆ ಮಾಡಿರುವ ಘಟನೆ ರಾಯಾಪುರದ ಬಳಿ ನಡೆದಿದೆ.

ಕಾರು ಚಾಲಕ ಬಿಆರ್ ಟಿಎಸ್ ಬಸ್ ಚಾಲಕನ ಮೇಲೆ ಯಾವ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿಲ್ಲ. ರಾಯಾಪುರದ ಬಳಿ ಈ ಗಲಾಟೆ ನಡೆದಿದ್ದರಿಂದ ಕೆಲ ಕಾಲ ವಾಹನ ದಟ್ಟನೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿತ್ತು.

ಹಲ್ಲೆಗೊಳಗಾದ ಬಸ್ ಚಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಕೂಡ ಭೇಟಿ ನೀಡಿದ್ದರು. ಹಲ್ಲೆ ಮಾಡಿದ ಹಾಗೂ ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.

Edited By : Nagaraj Tulugeri
Kshetra Samachara

Kshetra Samachara

10/12/2020 10:45 pm

Cinque Terre

72.78 K

Cinque Terre

6

ಸಂಬಂಧಿತ ಸುದ್ದಿ