ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಮೇಶ್‌ ಬಾಂಢಗೆ ಕೊಲೆ ಪ್ರಕರಣ- ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಬಾಬಾಸಾನಗಲ್ಲಿ ನಡೆದ ರಮೇಶ್‌ ಬಾಂಢಗೆ ಕೊಲೆ ಪ್ರಕರಣದ ಐವರು ಪ್ರಮುಖ ಆರೋಪಿಗಳನ್ನು ಹೆಡಮುರಿ ಕಟ್ಟಿದ್ದಾರೆ.

ಹೌದು. ಕಮರಿಪೇಟೆಯ ನಿವಾಸಿ ರಮೇಶ್ ಬಾಂಢಗೆ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಕೊಲೆ ಪ್ರಕರಣ ಭೇದಿಸಲು ಶಹರ ಠಾಣೆಯ ತಂಡವೊಂದು ಕಾರ್ಯಾಚರಣೆ ಮೂಲಕ ಹಳೇಹುಬ್ಬಳ್ಳಿ ಸದರಸೋಪಾ ನಿವಾಸಿ ರಫೀಕ್‌ ಅನ್ವರ್‌ಸಾಬ್ ಜವಾರಿ, ವಸೀಮ್ ಖಾಜಾಸಾಬ್ ಬಂಕಾಪುರ, ಶಿವಾಜಿ ದೇವೆಂದ್ರಪ್ಪ ಮಿಶಾಳ, ಮಯೂರನಗರದ ಫೈಯಾಜ್‌ಅಹ್ಮದ್‌ ಜಾಫರ್‌ಸಾಬ್‌ ಪಲ್ಲಾನ ಹಾಗೂ ಮಹಾವೀರನಗರದ ತೌಶೀಫ್ ಮಹ್ಮದ್‌ಇಸಾಕ್ ನರಗುಂದ ಬಂಧಿತರು. ಆರೋಪಿಗಳಿಂದ 6.10 ಲಕ್ಷ ರೂಪಾಯಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಹಾಗೂ 5 ಮೊಬೈಲ್‌ಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
Kshetra Samachara

Kshetra Samachara

08/12/2020 10:29 pm

Cinque Terre

53.86 K

Cinque Terre

1

ಸಂಬಂಧಿತ ಸುದ್ದಿ