ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊರ್ವ ಬರ್ಬರವಾಗಿ ಹತ್ಯೆಯಾಗಿದ್ದು, ಹುಬ್ಬಳ್ಳಿ ಜನರು ಮತ್ತೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಆ ಯುವಕನ ಕೊಲೆಗೆ ಕಾರಣ ಏನು ಅಂತಿರಾ ಈ ಸ್ಟೋರಿ ನೋಡಿ..
ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಹಾಡ ಹಗಲೆ ಕೊಲೆಯಾಗುತ್ತಿದೆ. ಪೊಲೀಸರು ಕ್ರೈಂ ಕಂಟ್ರೋಲ್ ಮಾಡುವುದಕ್ಕೆ ಎಲ್ಲಿಲ್ಲದ ಕಸರತ್ತು ನಡೆಸಿದರು, ಕ್ಷುಲ್ಲಕ ಕಾರಣಕ್ಕೆ ಹೆಣಗಳು ಬೀಳುವುದು ಮಾತ್ರ ತಪ್ಪಿಲ್ಲ.
ಕಳೆದ ರಾತ್ರಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿದ್ದ. ಇನ್ನು ಬದುಕಿ ಬಾಳ ಬೇಕಿದ್ದ ಆ ಯುವಕ ಬೀದಿ ಹೆಣವಾಗಿ ಬಿಟ್ಟಿದ್ದ. ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ಶಾರುಕ್ ಕೊಲೆಯಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಣಕಾಸಿನ ವಿಚಾರದಲ್ಲಿ ಶಾರುಕ್ ಹಾಗೂ ಸಲೀಮ್ ಬಳ್ಳಾರಿ ನಡುವೆ ಕಳೆದ ಕೆಲ ದಿನಗಳಿಂದ ವೈಷಮ್ಯ ಬೆಳೆದಿತ್ತು ಇದೆ ವಿಚಾರವಾಗಿ ಇಬ್ಬರ ನಡುವೆ ಕಳೆದ ರಾತ್ರಿ ನಡೆದ ಗಲಾಟೆಯಲ್ಲಿ ಶಾರುಖ್ ಕೊಲೆಯಾಗಿದ್ದಾನೆ.
ಕೊಲೆ ಆರೋಪಿ ಸಲೀಂ ಬಳ್ಳಾರಿ ಹಾಗೂ ಕೊಲೆಯಾದ ಶಾರುಖ್ ಇಬ್ಬರು ಸ್ನೇಹಿತರು. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿತ್ತು. ಕಳೆದ ರಾತ್ರಿ ಎಣ್ಣೆ ಹೊಡೆಯುವುದಕ್ಕೆ ಬಾ ಅಂತಾ ದೂರವಾಣಿ ಕರೆ ಮಾಡಿ ಶಾರುಖ್ ನನ್ನ ಕರೆಸಿಕೊಂಡಿದ್ದ ಸಲೀಂ ಬಳ್ಳಾರಿ, ಇದೆ ವಿಚಾರವಾಗಿ ಕಿರಿಕ್ ಮಾಡಿದ್ದಾನೆ.
ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಳಿಕ ಶಾರುಕ್ ಕೊಲೆಯಾಗಿ ಬಿಟ್ಟಿದ್ದ. ಶಾರುಖ್ ಕೊಲೆಯಾದ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಾಡಹಗಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬೆನ್ನಲ್ಲೇ ಈಗ ಯುವನೊಬ್ಬನನ್ನ ಕ್ಷುಲ್ಲಕ ಕಾರಣಕ್ಕೆ ಬರ್ಬರವಾಗಿ ಕೊಲೆ ಮಾಡಿರುವುದು ಹುಬ್ಬಳ್ಳಿಯನ್ನು ಮತ್ತೆ ಬೆಚ್ಚಿ ಬೀಳಿಸುವಂತೆ ಮಾಡಿದೆ..
Kshetra Samachara
04/12/2020 08:46 pm