ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ವಾಣಿಜ್ಯನಗರಿಯಲ್ಲಿ ಮತ್ತೆ ಹರಿಯಿತು ನೆತ್ತರು:ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು. ಮಧ್ಯರಾತ್ರಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಹಳೆಹುಬ್ಬಳ್ಳಿಯ ನಿವಾಸಿ ಶಾರುಖ್ ಸೌದಾಗರ್ ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದಲ್ಲಿ ಯುವಕನ ಮೇಲೆ ಮನಸ್ಸೊ ಇಚ್ಛೆ ದಾಳಿ ನಡೆಸಿ ತೊಡೆ ಹಾಗೂ ಬೆನ್ನು ಮೂಳೆ ಮುರಿಯುವಂತೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ನಂತರ ವಿದ್ಯಾನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಶಾರುಖ್ ನ ದೇಹ ಎಸೆದಿದ್ದು, ಸುದ್ದಿ ಮೂಲಗಳ ಪ್ರಕಾರ ನಟೋರಿಯಸ್ ಹಂತಕ ರೌಡಿಶಿಟರ್ ಸಲೀಂ ಬಳ್ಳಾರಿ ಈ ಕೊಲೆಯ ಪ್ರಮುಖ ಆರೋಪಿ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈಗಾಗಲೇ ಸಲೀಂ ಬಳ್ಳಾರಿಯ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಸ್ಥಳಕ್ಕೆ ಪೊಲಿಸರು ಭೇಟಿ ನಿಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

04/12/2020 08:27 am

Cinque Terre

88.84 K

Cinque Terre

9

ಸಂಬಂಧಿತ ಸುದ್ದಿ