ಧಾರವಾಡ: ಮಲಪ್ರಭಾ ಕಾಲುವೆಗೆ ಸಿಲುಕಿ ನಿನ್ನೆ ತೇಲಿ ಹೋಗಿದ್ದ ನವಲಗುಂದ ತಾಲೂಕಿನ ಶಿರೂರು ಗ್ರಾಮದ ಯುವಕನ ಮೃತದೇಹ ಇಂದು ಮೊರಬ-ತಲೆಮೊರಬ ಗ್ರಾಮದ ಬಳಿಯ ಕೆನಾಲ್ ನಲ್ಲಿ ಪತ್ತೆಯಾಗಿದೆ.
ವೀರೇಶ ಸಿದ್ಧಗಿರಿಮಠ (19) ಎಂಬ ಯುವಕ ನಿನ್ನೆ ಕ್ರಿಮಿನಾಶಕ ಸಿಂಪಡಣೆ ಮಾಡಲೆಂದು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆನಾಲ್ ಗೆ ಬಿದ್ದಿದ್ದ.
ಕೆನಾಲ್ ಗೆ ದೊಡ್ಡ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ. ವಿಷಯ ಗೊತ್ತಾದ ಕೂಡಲೇ ಪೊಲೀಸರು ಹಾಗೂ ಸ್ಥಳೀಯರು ಯುವಕನಿಗಾಗಿ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದರು.
ಇಂದು ಬೆಳಿಗ್ಗೆ ಮೊರಬ-ತಲೆಮೊರಬ ಗ್ರಾಮದ ಬಳಿಯ ಕೆನಾಲ್ ನಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
Kshetra Samachara
03/12/2020 01:09 pm