ಧಾರವಾಡ: ಧಾರವಾಡದ ಕೊಪ್ಪದಕೇರಿಯ ನಿವಾಸಿಯಾಗಿದ್ದ ವಕೀಲ ನಾರಾಯಣ ಮಾನೆ (48) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ನಿನ್ನೆ ಬೆಳಿಗ್ಗೆ ನಾರಾಯಣ ಅವರು ಗಳಗಿಹುಲಕೊಪ್ಪದ ತಮ್ಮ ಹೊಲಕ್ಕೆ ಹೋಗಿದ್ದರು. ಬೆಳಿಗ್ಗೆ ಹೋದವರು ರಾತ್ರಿಯಾದರೂ ಮನೆಗೆ ಬರದೇ ಇದ್ದದ್ದರಿಂದ ಮನೆಯವರು ಅವರಿಗೆ ಫೋನ್ ಮಾಡಿದ್ದಾರೆ ಫೋನ್ ಕೂಡ ರಿಸಿವ್ ಮಾಡದೇ ಇದ್ದದ್ದರಿಂದ ಮನೆಯವರು ಗಳಗಿಹುಲಕೊಪ್ಪಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ನಾರಾಯಣ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಹೃದಯಾಘಾತವಾಗಿರಬಹುದು ಎಂದು ವೈದ್ಯರು ಪ್ರಾಥಮಿಕವಾಗಿ ಹೇಳಿದ್ದು, ಆದರೆ, ಮನೆಯವರು ನಾರಾಯಣ ಅವರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಉದ್ಯಮಿಯಾಗಿದ್ದ ನಾರಾಯಣ ಅವರ ಕೈ ಮಡಚಿದ ಸ್ಥಿತಿಯಲ್ಲಿದ್ದು, ಮೂಗಿನಿಂದ ರಕ್ತಸ್ರಾವ ಕೂಡ ಆಗಿದೆ. ಈ ಸಂಬಂಧ ಕಲಘಟಗಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Kshetra Samachara
29/11/2020 10:46 am