ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಹಲ್ಲೆಗೊಳಗಾದವರು ಬೆಂಗಳೂರು ಪೊಲೀಸರಂತೆ

ಧಾರವಾಡ: ಧಾರವಾಡದ ಸಂಗಮ ವೃತ್ತದಲ್ಲಿ ಕಳ್ಳರನ್ನು ಹಿಡಿಯಲು ಬಂದ ವೇಳೆ ಇರಾನಿ ಗ್ಯಾಂಗ್ ನವರಿಂದ ಹಲ್ಲೆಗೊಳಗಾದ ಪೊಲೀಸರು ಆಂಧ್ರ ಮೂಲದವರಲ್ಲ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪೊಲೀಸರು ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಬಂದಿದ್ದ ಕಾಮಾಕ್ಷಿಪಾಳ್ಯ ಪಿಎಸ್ಐ ಸಂತೋಷ್ ಹಾಗೂ ಎಎಸ್ಐ ರವಿಕುಮಾರ್ ಅವರ ಮೇಲೆ ಇರಾನಿ ಗ್ಯಾಂಗ್ ನವರು ಹಲ್ಲೆ ನಡೆಸಿದ್ದಾರೆ.

ಈ ತಂಡದಲ್ಲಿ ಒಟ್ಟು ನಾಲ್ಕು ಜನ ಪೊಲೀಸ್ ಸಿಬ್ಬಂದಿ ಇದ್ದರು. ಕಳ್ಳರನ್ನು ಹಿಡಿಯಲು ಹೋದಾಗ ಅವರು ತಪ್ಪಿಸಿಕೊಳ್ಳಲು ಮತ್ತೊಂದು ಗುಂಪು ಸಹಾಯ ಮಾಡಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/11/2020 03:54 pm

Cinque Terre

60.87 K

Cinque Terre

5

ಸಂಬಂಧಿತ ಸುದ್ದಿ