ಹುಬ್ಬಳ್ಳಿ: ಪತ್ನಿ ಹಾಗೂ ಮಗುವನ್ನು ನೋಡಲು ಬಂದು ಬೀದಿ ಹೆಣವಾಗಿದ್ದ ವ್ಯಕ್ತಿಯ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಆರೋಪಿ ಯ ಹೆಡಮುರಿ ಕಟ್ಟುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಯಾದವನ ಹೆಂಡತಿಯ ಪ್ರಿಯಕರನೇ ಆರೋಪಿ ಎಂಬುದನ್ನ ಪತ್ತೆ ಹಚ್ಚಿರುವ ಪೊಲೀಸರು ಆರೋಪಿತನಾದ ಅದರಗುಂಚಿ ಗ್ರಾಮದ ಕಾಶಪ್ಪ ನಿಂಗಪ್ಪ ತಿಪ್ಪಣ್ಣನವರ ಎಂಬಾತನನ್ನ ಬಂಧಿಸಿ ಪ್ರಕರಣವನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಜಗದೀಶ ಕೊಲ್ಲಾಪುರ ಎಂಬ ವ್ಯಕ್ತಿಯ ಶವ ಮಾವನ ಊರಾದ ಅಂಚಟಗೇರಿ ಬಳಿಯ ಚೆನ್ನಾಪುರ ರಸ್ತೆಯಲ್ಲಿ ಸಿಕ್ಕಿತ್ತು.
ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು,ಕೊಲೆಯಾದ ಜಗದೀಶನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಕಾಶಪ್ಪ, ಜಗದೀಶ ಗ್ರಾಮಕ್ಕೆ ಬಂದಾಗ ಕರೆದುಕೊಂಡು ಹೋಗಿ ಊರ ಹೊರಗೆ ಮದ್ಯ ಕುಡಿಸಿ, ನಶೆ ಏರಿದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಆರೋಪಿಯನ್ನ 12ಗಂಟೆಯಲ್ಲೇ ಬಂಧನ ಮಾಡುವಲ್ಲಿ ಪಿಎಸ್ಐ ಮಂಜುಳಾ ಮತ್ತು ಚಾಮುಂಡೇಶ್ವರಿ, ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಮಂಜು ಹೆಳವರ, ಮಂಜು ಅಮ್ಮಿನಬಾಯಿ, ಅರ್ಜುನ ಟಕಾಯಿ, ಮಂಜು ವಾಲಿಕಾರ, ಚಂದ್ರು ಜನಗಣ್ಣನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
25/11/2020 05:53 pm