ಹುಬ್ಬಳ್ಳಿ: ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ.
ಹಾನಗಲ್ ನಾರಾಯಣ ದೇವಸ್ಥಾನ ಬಳಿಯ ನಿವಾಸಿ ಜಗದೀಶ ಮನೋಹರ ಕೊಲ್ಲಾಪುರ (27) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದ್ದು,ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿಯನ್ನು ನೋಡಲು ಬಂದಿದ್ದ.ನಾಲ್ಕೈದು ದಿನಗಳ ಹಿಂದೆ ಹಾನಗಲ ಬಿಟ್ಟಿದ್ದು,ಎರಡು ದಿನಗಳ ಹಿಂದೆ ಅಂಚಟಗೇರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಅಳಿಯ ಅಮಿತ ಕಟಿಂಗ್ ಶಾಪ್ ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆಯಾಗಿದ್ದಾನೆ.ಯಾರೋ ಅರಣ್ಯ ಪ್ರದೇಶಕ್ಕೆ ಕರೆಸಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
24/11/2020 11:07 am