ಹುಬ್ಬಳ್ಳಿ:ಇಲ್ಲಿಯ ನವನಗರದ ನಿವಾಸಿ ಮುಸ್ತಾಕ್ ಎಂಬಾತ ಗಾಮನಗಟ್ಟಿಯ ರೇಣುಕಾ ಎಂಬಾಕೆಯನ್ನು ಅಪಹರಿಸಿಕೊಂಡು ಹೋಗಿರುವ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರೇಣುಕಾ ಪತಿಗೆ ಮುಸ್ತಾಕ್‌ನು ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ರೇಣುಕಾರನ್ನು ಅಪಹರಿಸುವುದಾಗಿಯೂ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿದ್ದನು. ನ.18ರಂದು ಮಧ್ಯಾಹ್ನ 11ರ ವೇಳೆಗೆ ಗಾಮನಗಟ್ಟಿಯ ನಿವಾಸದಿಂದ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ’ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
24/11/2020 09:12 am