ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರೀಕ್ಷೆ ಬರೆಯಲು ಬಂದಿದ್ದ ಅಸಲಿ ಪೊಲೀಸ್ ಪೇದೆ ಅರೆಸ್ಟ್

ಹುಬ್ಬಳ್ಳಿ: ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ನಕಲಿ ಅಭ್ಯರ್ಥಿಯೊಬ್ಬನನ್ನ ಅವಳಿ‌ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ನಿವಾಸಿ ಅಡಿವೆಪ್ಪ ಯಲ್ಲಪ್ಪ ಯರಗುದ್ರಿ (24) ಎಂಬಾತನೇ ನಕಲಿ ಅಭ್ಯರ್ಥಿ. ಈತ ರಾಯಬಾಗ ತಾಲೂಕು ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಾನೆ‌.‌

ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಪೇದೆ ನೇಮಕಾತಿಗೆ ನಿನ್ನೆ ಪರೀಕ್ಷೆ ನಡೆದಿತ್ತು‌‌. ನಕಲಿ ಅಭ್ಯರ್ಥಿಯಾದ ಅಡಿವೆಪ್ಪ ಯರಗುದ್ರಿ ಈ ಪರೀಕ್ಷೆಗೆ ಹಾಜರಾಗಿದ್ದ. ಆದರೆ ಅಸಲಿ ಈತನ ಸೋದರ ಸಂಬಂಧಿ ರಾಯಭಾಗ ತಾಲೂಕು ಸವಸುದ್ದಿ ಗ್ರಾಮದ ಲಕ್ಕಪ್ಪ ಲಕ್ಷ್ಮಣ ಬೆಟಗೇರಿ ಎಂಬಾತ ಅಸಲಿ ಅಭ್ಯರ್ಥಿಯಾಗಿದ್ದಾನೆ‌.

ಪರೀಕ್ಷೆಯ ಓಎಂಆರ್ ಪತ್ರಿಕೆಯಲ್ಲಿ ಅಡಿವೆಪ್ಪ ಯರಗುದ್ರಿ ನಕಲಿ ಸಹಿ ಮಾಡಿದ್ದಾನೆ‌. ಕಾನೂನು ಸುವ್ಯವಸ್ಥೆ ಡಿಸಿಪಿ ಕೆ. ರಾಮರಾಜನ್ ಹಾಗೂ ಸಂಚಾರ ಎಸಿಪಿ ಎಂ ಎಸ್ ಹೊಸಮನಿ ಅವರು ಈ ನಕಲಿ ಅಭ್ಯರ್ಥಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಗೋಕುಲ ರೋಡ್ ಠಾಣೆಗೆ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

Edited By : Nagaraj Tulugeri
Kshetra Samachara

Kshetra Samachara

23/11/2020 11:03 am

Cinque Terre

52.39 K

Cinque Terre

5

ಸಂಬಂಧಿತ ಸುದ್ದಿ