ಹುಬ್ಬಳ್ಳಿ:ಮದುವೆಯಾಗಲು ಯುವತಿ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಖಸಾಯಿ ಓಣಿಯಲ್ಲಿ ನಡೆದಿದೆ.
ಮಲ್ಲಿಕ ಬೆಪಾರಿ (30) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಮಲ್ಲಿಕ ಕೆಲವು ದಿನಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ.ಯುವತಿಮನೆಗೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಮಲ್ಲಿಕನ ಮದುವೆ ಪ್ರಸ್ತಾಪವನ್ನು ಯುವತಿ ಮನೆಯವರು ತಳ್ಳಿ ಹಾಕಿದ್ದರಿಂದ ಬೇಸತ್ತ ಯುವಕ ಮೈ ಅಬ್ ಮರ್ತಾ ಹು ಎಂದು ಸ್ನೇಹಿತನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಯುವಕನ ಮನೆಗೆ ಧಾವಿಸಿದ ಸ್ನೇಹಿತರು ನೇಣಿನ ಕುಣಿಕೆಯಲ್ಲಿ ಬಿದ್ದಿದ್ದ ಮಲ್ಲಿಕನನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸಂಬಂಧ ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/11/2020 10:14 pm