ಕುಂದಗೋಳ : ಪಟ್ಟಣದ ಎಪಿಎಂಸಿ ಆವರಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಏಳು ಜನರನ್ನು ಕುಂದಗೋಳ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನ.15 ರ ರವಿವಾರ ಮಧ್ಯಾಹ್ನ ಕುಂದಗೋಳ ಎಪಿಎಂಸಿ ಆವರಣದ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಆಡುವವರನ್ನು ವಶಕ್ಕೆ ಪಡೆದ ಪೊಲೀಸರು ಬಂಧಿತರಿಂದ 5.100 ರೂಪಾಯಿ ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನ ವಶಪಡಿಸಿಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
Kshetra Samachara
17/11/2020 03:47 pm