ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಒಗೆದು ಬಂದಿದ್ದ ಪ್ರಕರಣವನ್ನು ಬೆನ್ನು ಹತ್ತಿದ್ದ ಮುಂಡಗೋಡ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಕಾತೂರ ಅರಣ್ಯ ಪ್ರದೇಶದಲ್ಲಿ ಏಳು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು.
ಪ್ರಕರಣದ ತನಿಖೆಯನ್ನು ಬೆನ್ನು ಹತ್ತಿದ ಪೊಲೀಸರು ಹುಬ್ಬಳ್ಳಿ ನವನಗರದ ವರದರಾಜ ಶ್ರೀನಿವಾಸ ನಾಯಕ (32) ಎಂಬಾತನ ಕೊಲೆಯಾಗಿತ್ತು ಎಂಬುವುದು ತಿಳಿದು ಬಂದಿದೆ.
ಇನ್ನೂ ಪ್ರಕರಣವನ್ನು ಬೇಧಿಸಿದ ಪೊಲೀಸರು
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಬಂಧಿಸಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಪ್ರದೇಶದ ಅಭಿಷೇಕ್ ಶೇಟ್, ತಾಜ್ ನಗರದ ಸುರೇಶ ನೂರಪ್ಪ ಲಮಾಣಿ, ರಾಮಕುಮಾರ ಕೃಷ್ಣ ತಾಟಿಸಮ್ಲಾ ಹಾಗೂ ಕಾತೂರ ಗ್ರಾಮದ ಬಸವರಾಜ ಬಂಧಿತ ಆರೋಪಿಗಳಾಗಿದ್ದಾರೆ.
ಆಸ್ತಿಗಾಗಿ ಆರೋಪಿ ಅಭಿಷೇಕ್ ದೊಡ್ಡಮ್ಮನ ಮಗನನ್ನು ಕೊಲೆ ಮಾಡಿದ್ದ.ಅಭಿಷೇಕ ಮೃತ ಶ್ರೀನಿವಾಸನ ತಾಯಿಯ ತಂಗಿ ಮಗನಾಗಿದ್ದು,ಕೊಲೆ ಮಾಡಿದರೆ ಶ್ರೀನಿವಾಸ ಅವರ ಆಸ್ತಿ ತನಗೇ ಸಿಗುತ್ತದೆ ಎಂದು ಕೃತ್ಯ ಮಾಡಲಾಗಿದೆ ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ.
ಶಿರಸಿ ಕಡೆ ಪ್ರವಾಸಕ್ಕೆ ಹೋಗುವ ನೆಪ ಮಾಡಿ ಕರೆದೊಯ್ದಿದ್ದ ಆರೋಪಿಗಳು.ನಾಗನೂರು ಸನಿಹದ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಕೊಲೆ ಮಾಡಿದ್ದಾರೆ.
ಮೃತ ವ್ಯಕ್ತಿಯ ಮೊಬೈಲ್ ಅನ್ನು ಗೋವಾದಲ್ಲಿ ಸಮುದ್ರಕ್ಕೆ ಎಸೆದಿದ್ದರು ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿದ ಮುಂಡಗೋಡ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮೂಲಕ ನಾಲ್ವರನ್ನು ಬಂಧಿಸಿದ್ದಾರೆ.
Kshetra Samachara
17/11/2020 12:24 pm