ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೂಜಾಡಿದ್ದ ನಾಲ್ವರು ಪೊಲೀಸರು ಅಮಾನತು

ಧಾರವಾಡ: ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಬಳಿ ಇಸ್ಪೀಟ್ ಜೂಜಾಟವಾಡಿ ಪರಾರಿಯಾಗಿದ್ದ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬಿಜೆಪಿ ಮುಖಂಡರೊಬ್ಬರ ಜೊತೆಗೆ ಸೇರಿ ಪೊಲೀಸರೇ ಜೂಜಾಟವಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಡಿವೈಎಸ್‌ಪಿ ರವಿ ನಾಯಕ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಡಿಎಆರ್ ಹಾಗೂ ಗರಗ ಠಾಣೆ ಪೊಲೀಸರು ಸೇರಿದಂತೆ ಒಟ್ಟು 10 ಜನ ಪೊಲೀಸರು ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಕೃಷ್ಣಕಾಂತ್ ಅವರು ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್ ಸೈಯ್ಯದನವರ್ ಹಾಗೂ ಮೈಯುದ್ದೀನ ಮುಲ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

15/11/2020 08:40 pm

Cinque Terre

78.93 K

Cinque Terre

7

ಸಂಬಂಧಿತ ಸುದ್ದಿ