ಹುಬ್ಬಳ್ಳಿ- ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಇನ್ಸ್ಪೆಕ್ಟರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಜೀವ ಬೆದರಿಕೆ ಹಾಕುವ ಮೂಲಕ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಹೊಡೆದಿರುವ ಆರೋಪ ನವನಗರ ಠಾಣೆಯ ಇನ್ಸ್ಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಕೇಳಿಬಂದಿದೆ. ಈ ಆರೋಪದ ಹಿನ್ನಲೆಯಲ್ಲಿ ಪ್ರಭು ಸೂರಿನ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದೇ ವರ್ಷದ ಜೂನ್ 25ರಂದು ಸಾಫ್ಟ್‌ವೇರ್ ಇಂಜಿನಿಯರ್ ಶಿವಲೀಲಾ ಪಾಟೀಲ್ ಜೊತೆ ಸೇರಿ ಇನ್ಸ್ಪೆಕ್ಟರ್ ಸುಮಾರು 2ಕೆಜಿ ತೂಕದ ಚಿನ್ನಾಭರಣ ದೋಚಿದ್ದಾರೆ ಎಂದು ನವನಗರ ನಿವಾಸಿ ಓಂಕಾರ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Kshetra Samachara
15/11/2020 01:19 pm